ಮಾಜಿ ಐಎಎಸ್ ಅಧಿಕಾರಿ, ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಮನೆ, ಕಚೇರಿಯ ಮೇಲೆ ಈಡಿ ದಾಳಿ

Update: 2021-09-16 07:43 GMT
ಹರ್ಷ ಮಂದರ್

ಹೊಸದಿಲ್ಲಿ: ಜಾರಿ ನಿರ್ದೇಶನಾಲಯವು (ಈಡಿ) ನಿವೃತ್ತ ಐಎಎಸ್ ಅಧಿಕಾರಿ  ಹಾಗೂ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಅವರ ಮನೆ ಹಾಗೂ  ಕಚೇರಿಯ ಮೇಲೆ ಗುರುವಾರ ದಾಳಿ ನಡೆಸಿತು ಎಂದು ವರದಿಯಾಗಿದೆ.

ಅಡ್ಚಿನಿಯಲ್ಲಿರುವ ಅವರ ಕಚೇರಿ ಹಾಗೂ  ವಸಂತ್ ಕುಂಜ್‌ನಲ್ಲಿರುವ ಅವರ ನಿವಾಸದ ಜೊತೆಗೆ, ಮೆಹ್ರೌಲಿಯಲ್ಲಿ ಕಾರ್ಯಕರ್ತರಿಂದ ನಡೆಸಲ್ಪಡುವ ಚಿಲ್ಡ್ರನ್ ಹೋಮ್ ಮೇಲೆಯೂ ಈಡಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಮಂದರ್ ತನ್ನ ಪತ್ನಿಯೊಂದಿಗೆ ಜರ್ಮನಿಗೆ ತೆರಳಿದ ಕೆಲವು ಗಂಟೆಗಳ ನಂತರ ದಾಳಿಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ವಸಂತ ಕುಂಜ್‌ನಲ್ಲಿರುವ ಅವರ ನಿವಾಸ ಮತ್ತು ಅಡ್ಚಿನಿಯಲ್ಲಿರುವ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಗೆ ದಾಳಿ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ.

ಗುರುವಾರ ಮುಂಜಾನೆ 3: 30 ರ ಸುಮಾರಿಗೆ ಮಂದರ್ ಅವರು  ಬರ್ಲಿನ್‌ನ ರಾಬರ್ಟ್ ಬಾಷ್ ಅಕಾಡೆಮಿಯಲ್ಲಿ ಫೆಲೋಶಿಪ್‌ಗಾಗಿ ಜರ್ಮನಿಗೆ ತೆರಳಿದರು. ಅವರು ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News