ಯೂಟ್ಯೂಬ್ ವೀಡಿಯೊಗಳ ಮೂಲಕ ತಿಂಗಳಿಗೆ 4 ಲಕ್ಷ ರೂ. ಗಳಿಸುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ

Update: 2021-09-17 13:13 GMT

ಭರೂಚ್: ಕೇಂದ್ರ ರಸ್ತೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಯೂಟ್ಯೂಬ್ ವೀಡಿಯೊಗಳ ಮೂಲಕ ತಿಂಗಳಿಗೆ ನಾಲ್ಕುಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಈವಿಚಾರವನ್ನು ಅವರೇ ಬಹಿರಂಗಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ವೀಡಿಯೊ ಉಪನ್ಯಾಸಗಳ ವೀಕ್ಷಣೆಯು ಕೋವಿಡ್-19 ಸಮಯದಲ್ಲಿ ಏರಿಕೆಯಾಗಿದ್ದು, ಯೂಟ್ಯೂಬ್ ನಿಂದ ತಿಂಗಳಿಗೆ ಗೌರವ ಧನದ ರೂಪದಲ್ಲಿ 4 ಲಕ್ಷ ರೂ. ಪಡೆಯುತ್ತಿದ್ದೇನೆ ಎಂದು ಶುಕ್ರವಾರ ಗಡ್ಕರಿ ಹೇಳಿದ್ದಾರೆ.

ನಾನು ಬಾಣಸಿಗನಾಗಿ ಮನೆಯಲ್ಲಿ ಅಡುಗೆ ತಯಾರಿ ಆರಂಭಿಸಿದೆ ಹಾಗೂ ವೀಡಿಯೊ ಕಾನ್ಫರೆನ್ಸ್ ಮೂಲಕ ಉಪನ್ಯಾಸಗಳನ್ನು ನೀಡಿದೆ. ಆನ್ ಲೈನ್ ನಲ್ಲಿ ನಾನು 950ಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿದ್ದೇನೆ. ವಿದೇಶದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ಉಪನ್ಯಾಸಗಳನ್ನು ನೀಡಿದ್ದು, ಯೂಟ್ಯೂಬ್ ನಲ್ಲಿ ಆ ವೀಡಿಯೊಗಳು ಅಪ್ ಲೋಡ್ ಆಗಿವೆ ಎಂದು ಗಡ್ಕರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News