ರಾಜಸ್ಥಾನದ ಮಾಲ್ಪುರ ಪಟ್ಟಣದಲ್ಲಿ 'ಲ್ಯಾಂಡ್ ಜಿಹಾದ್': ಬಿಜೆಪಿ ಶಾಸಕ

Update: 2021-09-17 18:05 GMT
photo: twitter 

ಜೈಪುರ: ಮುಸ್ಲಿಮರು ಆಸ್ತಿಗಳನ್ನು ಖರೀದಿಸಿದ ನಂತರ ಟೋಂಕ್‌ ಜಿಲ್ಲೆಯ ಮಾಲ್ಪುರ ಪಟ್ಟಣದಿಂದ ಹಿಂದೂಗಳು ವಲಸೆ ಹೋಗಬೇಕಾಯಿತು ಎಂದು ರಾಜಸ್ಥಾನ ವಿಧಾನಸಭೆಯಲ್ಲಿ ಶುಕ್ರವಾರ ಆರೋಪಿಸಿದ ಬಿಜೆಪಿ ಶಾಸಕರೊಬ್ಬರು ಇದನ್ನು "ಲ್ಯಾಂಡ್ ಜಿಹಾದ್" ಎಂದು ಕರೆದಿದ್ದಾರೆ.

ಕಡಿಮೆ  ದರದಲ್ಲಿ ಆಸ್ತಿಯನ್ನು ಖರೀದಿಸಿದ ನಂತರ,ಮುಸ್ಲಿಮರು, ಹಿಂದೂಗಳಿಗೆ ಬೆದರಿಕೆ ಹಾಕುತ್ತಾರೆ. ಹಿಂದೂ ಕುಟುಂಬಗಳಲ್ಲಿ ಭಯ ಹಾಗೂ  ಅಭದ್ರತೆಯ ಭಾವನೆ ಇದ್ದುದರಿಂದ ಅವರಲ್ಲಿ 600 ರಿಂದ 800 ಜನರು ವಲಸೆ ಹೋಗಿದ್ದಾರೆ. ಅಭದ್ರತೆಯಿಂದಾಗಿ ಹಿಂದೂಗಳು ಹಾಗೂ ಜೈನ ಸಮುದಾಯದ ಜನರು ವಲಸೆ ಹೋಗದಂತೆ ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಮಾಲ್ಪುರ ಶಾಸಕ ಕನ್ಹಯ್ಯ ಲಾಲ್ ಅವರು ಹೇಳಿದ್ದಾರೆ.

ಈ ಹಿಂದೆಯೂ ಸಹ, ರಾಜಸ್ಥಾನದ ಟೋಂಕ್ ಜಿಲ್ಲೆಯ ನೂರಾರು ಹಿಂದೂ ಕುಟುಂಬಗಳು ಕೋಮು ವಿಚಾರದಿಂದ ಉಂಟಾದ ಅಭದ್ರತೆಯಿಂದಾಗಿ ಇತರ ಪ್ರದೇಶಗಳಿಗೆ ವಲಸೆ ಹೋಗಬೇಕಾಯಿತು ಎಂದು ಬಿಜೆಪಿ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News