ಮುಂದಿನ ತಿಂಗಳು ಭಾರತದಿಂದ ಹೆಚ್ಚುವರಿ ಕೋವಿಡ್ ಲಸಿಕೆಗಳ ರಫ್ತು ಪುನರಾರಂಭ:ಮನ್ಸುಖ್ ಮಾಂಡವಿಯಾ

Update: 2021-09-20 11:46 GMT

ಹೊಸದಿಲ್ಲಿ: ಮುಂದಿನ ತಿಂಗಳಿನಿಂದ ಭಾರತವು ಹೆಚ್ಚುವರಿ ಲಸಿಕೆಗಳ ರಫ್ತು ಹಾಗೂ ದೇಣಿಗೆಯನ್ನು ಪುನರಾರಂಭಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಘೋಷಿಸಿದರು.  

ಪ್ರಧಾನಿ ನರೇಂದ್ರ ಮೋದಿ ಅವರು  ಅಮೆರಿಕಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು ಈ  ಘೋಷಣೆ ಮಾಡಲಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ ವಿಶ್ವದ ಅತ್ಯಂತ ದೊಡ್ಡ ಲಸಿಕೆಗಳನ್ನು ತಯಾರಿಸುವ ದೇಶವಾಗಿರುವ ಭಾರತ ಸೋಂಕುಗಳು ಸ್ಫೋಟಗೊಂಡಂತೆ ತನ್ನ ಜನರಿಗೆ  ಲಸಿಕೆ ಹಾಕುವತ್ತ ಗಮನಹರಿಸಲು ಎಪ್ರಿಲ್‌ನಲ್ಲಿ ಲಸಿಕೆ ರಫ್ತುಗಳನ್ನು ನಿಲ್ಲಿಸಿತ್ತು.

ಸರಕಾರವು ತನ್ನ ಎಲ್ಲಾ 94.4 ಕೋಟಿ ವಯಸ್ಕರಿಗೆ ಡಿಸೆಂಬರ್ ವೇಳೆಗೆ ಲಸಿಕೆ ಹಾಕಲು ಬಯಸಿದೆ ಹಾಗೂ  ಇದುವರೆಗೆ ಅವರಲ್ಲಿ 61 ಪ್ರತಿಶತದವರಿಗೆ ಕನಿಷ್ಠ ಒಂದು ಡೋಸ್ ಅನ್ನು ನೀಡಲಾಗಿದೆ.

'ಲಸಿಕೆ ಮೈತ್ರಿ' ಎಂದು ಕರೆಯಲ್ಪಡುವ ಹೊಸ ರಫ್ತು ಅಭಿಯಾನ ನೆರೆಹೊರೆಯ ರಾಷ್ಟ್ರಗಳಿಗೆ ಮೊದಲ ಆದ್ಯತೆ ನೀಡುತ್ತದೆ. ಹೆಚ್ಚುವರಿ ಲಸಿಕೆಗಳನ್ನು ಮಾತ್ರ ರಫ್ತು ಮಾಡಲಾಗುವುದು. ಎಪ್ರಿಲ್‌ನಿಂದ ದೇಶದ ಮಾಸಿಕ ಲಸಿಕೆ ಉತ್ಪಾದನೆಯು ದ್ವಿಗುಣಗೊಂಡಿದೆ ಎಂದು ಮಾಂಡವೀಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News