ಆಗಸ್ಟ್ 2019ರಲ್ಲಿ ಅಸ್ಸಾಂನಲ್ಲಿ ಪ್ರಕಟಗೊಂಡ ಎನ್‍ಆರ್ಸಿ ಅಂತಿಮ ಎಂದ ಫಾರಿನರ್ಸ್ ಟ್ರಿಬ್ಯುನಲ್

Update: 2021-09-20 14:34 GMT

 ಗುವಹಾಟಿ: ಅಸ್ಸಾಂನಲ್ಲಿ ಜಾರಿಗೊಳಿಸಲಾಗಿದ್ದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಅಥವಾ ಎನ್‍ಆರ್‍ಸಿ ಕುರಿತಾದ ಅಧಿಸೂಚನೆಯನ್ನು ಭಾರತದ ರಿಜಿಸ್ಟ್ರಾರ್ ಜನರಲ್ ಇನ್ನಷ್ಟೇ ಹೊರಡಿಸಬೇಕಿದ್ದರೂ ಆಗಸ್ಟ್ 31, 2019ರಂದು ರಾಜ್ಯದಲ್ಲಿ ಪ್ರಕಟಿಸಲಾದ ಎನ್‍ಆರ್‍ಸಿ ಅಂತಿಮ ಎನ್‍ಆರ್‍ಸಿ ಆಗಿದೆ ಎಂದು ರಾಜ್ಯದ ಫಾರಿನರ್ಸ್ ಟ್ರಿಬ್ಯುನಲ್ ತೀರ್ಪು ನೀಡಿದೆ.

ಎನ್‍ಆರ್‍ಸಿ ಕುರಿತಾದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಭಾರತೀಯ ಪೌರ ಎಂದು ಘೋಷಿಸಿದ ಕರೀಂಗಂಜ್ ಜಿಲ್ಲೆಯ ಟ್ರಿಬ್ಯುನಲ್, ಎನ್‍ಆರ್‍ಸಿ ಅನ್ವಯ ರಾಷ್ಟ್ರೀಯ ಗುರುತುಪತ್ರಗಳನ್ನು ಇನ್ನಷ್ಟೇ ನೀಡಬೇಕಿದ್ದರೂ "ಅಸ್ಸಾಂನಲ್ಲಿ 2019ರಲ್ಲಿ ಪ್ರಕಟಿಸಲಾದ ಎನ್‍ಆರ್‍ಸಿಯೇ ಅಂತಿಮ ಎಂಬ ಬಗ್ಗೆ ಯಾವುದೇ ಸಂಶಯವಿಲ್ಲ" ಎಂದು ಹೇಳಿದೆ.

ಜಮಿರಲ ಗ್ರಾಮದ ಬಿಕ್ರಮ್ ಸಿಂಗ್ ಎಂಬಾತನ ನಾಗರಿಕತ್ವದ ಕುರಿತು ಸಂಶಯವಿದ್ದ `ಡಿ ವೋಟರ್' ಪ್ರಕರಣದಲ್ಲಿ ಈ ತೀರ್ಪು ಬಂದಿದೆ. ಆತನ ವಿರುದ್ಧ ಅಕ್ರಮ ವಲಸಿಗ ಕಾಯಿದೆ ಅನ್ವಯ 1999ರಲ್ಲಿ ಮೊದಲು ಪ್ರಕರಣ ದಾಖಲಿಸಲಾಗಿತ್ತು. ಆದರೆ ಈ ಕಾಯಿದೆಯನ್ನು 2005ರಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ಪ್ರಕರಣವನ್ನು ಫಾರಿನರ್ಸ್ ಟ್ರಿಬ್ಯುನಲ್‍ಗೆ ವರ್ಗಾಯಿಸಲಾಗಿತ್ತು.

ಸಿಂಘಾ ಹೆಸರು ಅಂತಿಮ ಎನ್‍ಆರ್‍ಸಿ ಯಲ್ಲಿ ಇರುವುದರಿಂದ ಆತನ ನಾಗರಿಕತ್ವ ಕಾನೂನಬದ್ಧವಾಗಿ ಸಾಬೀತಾಗದೇ ಇದ್ದರೂ ಆತ ಹಾಗೂ ಆತನ ಕುಟುಂಬದ ಇತರ ಸದಸ್ಯರುಗಳ ಸಂಬಂಧ ಸಾಬೀತಾಗಿದೆ, ಎಂದು ನ್ಯಾಯಾಲಯ ಹೇಳಿದೆ. ಆತನ ಕುಟುಂಬದ ಇತರ ಸದಸ್ಯರುಗಳ ಹೆಸರು ಕೂಡ ಅಂತಿಮ ಎನ್‍ಆರ್‍ಸಿಯಲ್ಲಿರುವುದರಿಂದ ಅದು ಅವರ ಭಾರತೀಯ ಪೌರತ್ವದ ಪುರಾವೆಯಾಗಿದೆ  ಎಂದು ಟ್ರಿಬ್ಯುನಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News