915 ಕೋ. ರೂ. ಹಣ ಅಕ್ರಮ ವರ್ಗಾವಣೆ: ಮುಂಬೈ ಅಶರ್ ಅಗ್ರೊ ಸಂಸ್ಥೆಯ ಎಂಡಿ ಬಂಧನ

Update: 2021-09-20 18:08 GMT

ಹೊಸದಿಲ್ಲಿ, ಸೆ. 20: 915,65 ಕೋಟಿ ರೂಪಾಯಿ ವಂಚಿಸಿದ ಹಾಗೂ ಬ್ಯಾಂಕ್ ವಂಚನೆ ಆರೋಪದಲ್ಲಿ ಅಶರ್ ಅಗ್ರೋ ಲಿಮಿಟೆಡ್ನ ಆಡಳಿತ ನಿರ್ದೇಶಕ ವಿನೋದ್ ಚತುರ್ವೇದಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‌

ಅಶರ್ ಅಗ್ರೋ ಲಿಮಿಟೆಡ್ ಹಾಗೂ ಅದರ ಸಮೂಹ ದೀವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಶನ್ನೊಂದಿಗೆ ನಕಲಿ ವ್ಯವಹಾರದಲ್ಲಿ ಭಾಗಿಯಾಗಿದೆ ಎಂದು ಎಂದು ಅವರು ಹೇಳಿದ್ದಾರೆ. ಸಿಬಿಐ ದಾಖಲಿಸಿದ ಎಫ್ಐಆರ್ ಆಧಾರದಲ್ಲಿ ಕೇಂದ್ರದ ಜಾರಿ ನಿರ್ದೇಶನಾಲಯ ಅಶರ್ ಅಗ್ರೋ ಲಿಮಿಟೆಡ್, ಅದರ ಮುಖ್ಯ ಅಧಿಕಾರಿಗಳಾದ ವಿನೋದ್ ಕುಮಾರ್ ಚತುರ್ವೇದಿ, ಮನೋಜ್ ಪಾಠಕ ವಿರುದ್ಧ 2019 ಜನವರಿಯಲ್ಲಿ ತನಿಖೆ ನಡೆಸಿತ್ತು ಎಂದು ಅವರು ತಿಳಿಸಿದ್ದಾರೆ. ಅಶರ್ ಅಗ್ರೋ ಲಿಮಿಟೆಡ್ ಬ್ಯಾಂಕ್ಗಳ ಒಕ್ಕೂಟದಿಂದ ಸಾಲ ಪಡೆದುಕೊಂಡಿತ್ತು ಹಾಗೂ ಅದನ್ನು ಅಕ್ರಮವಾಗಿ ವರ್ಗಾವಣೆ ಮಾಡಿತ್ತು ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News