ಮಹಂತ ನರೇಂದ್ರ ಗಿರಿ ಸಾವಿನ ಪ್ರಕರಣದ ಆರೋಪಿಯ ಬಂಧನ: ಡಿಸಿಎಂ ಕೇಶವಪ್ರಸಾದ್ ಮೌರ್ಯ

Update: 2021-09-21 06:23 GMT

ಲಕ್ನೊ: ಮಹಂತ ನರೇಂದ್ರ ಗಿರಿ ಶವವಾಗಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಸಾವಿನ ಪ್ರಕರಣದಲ್ಲಿಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಹೇಳಿದ್ದಾರೆಂದು The India Today ತಿಳಿಸಿದೆ.

ಮಹಂತ ನರೇಂದ್ರ ಗಿರಿಯವರ ಶಿಷ್ಯ ಆನಂದ ಗಿರಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆ ನಂತರ ಆತನನ್ನು ಸೋಮವಾರ ರಾತ್ರಿ ಹರಿದ್ವಾರದಿಂದ ಬಂಧಿಸಲಾಯಿತು.

ನರೇಂದ್ರ ಗಿರಿ ಸಾವಿನ ಸಮಯದಲ್ಲಿ ಮಠದಲ್ಲಿದ್ದ ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸುತ್ತಿದ್ದಾರೆ. ಮೃತ ನರೇಂದ್ರ ಗಿರಿ ಅವರ ವೀಡಿಯೊ ಹೇಳಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನು ತನಿಖೆಯ ಭಾಗವಾಗಿ ತನಿಖೆ ಮಾಡಲಾಗುವುದು ಎಂದು ತಿಳಿದುಬಂದಿದೆ.

ಈ ಹಿಂದೆ, ಉತ್ತರಪ್ರದೇಶದ ಕಾನೂನು ಸಚಿವ ಬ್ರಜೇಶ್ ಪಾಠಕ್ ಅವರು ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ  ಬಿಡುವುದಿಲ್ಲ ಎಂದು ಸುದ್ದಿವಾಹಿನಿ ‘ಆಜ್ ತಕ್‌’ಗೆ ಹೇಳಿದ್ದರು.

 ದಾರ್ಶನಿಕರ ಸಂಘಟನೆಯಾದ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹಂತ ನರೇಂದ್ರ ಗಿರಿ ಸೋಮವಾರ ಬಘಂಬರಿ ಮಠದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲಿಸ್ ಪ್ರಕಾರ, ಮಹಂತ್ ನರೇಂದ್ರ ಗಿರಿಯ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News