ಜಮ್ಮು-ಕಾಶ್ಮೀರ: ಸೇನಾ ಹೆಲಿಕಾಪ್ಟರ್ ಪತನ, ಇಬ್ಬರು ಪೈಲಟ್ ಗಳ ಮೃತ್ಯು

Update: 2021-09-21 15:29 GMT

ಶ್ರೀನಗರ,ಸೆ.21: ಜಮ್ಮು-ಕಾಶ್ಮೀರದ ಉಧಮಪುರ ಜಿಲ್ಲೆಯ ಪತನಿತೋಪ್ ಸಮೀಪದ ಗುಡ್ಡಪ್ರದೇಶದಲ್ಲಿ ಮಂಗಳವಾರ ಸೇನೆಯ ‘ಚೀತಾ ’ ಹೆಲಿಕಾಪ್ಟರ್ ಪತನಗೊಂಡಿದ್ದು,ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್ ಪತನದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ಗಳನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.
 
ಮೃತ ಪೈಲಟ್ಗಳಾದ ರೋಹಿತ್ ಕುಮಾರ್ ಮತ್ತು ಅನುಜ ರಾಜಪೂತ್ ಅವರು ಮೇಜರ್ ದರ್ಜೆಯ ಅಧಿಕಾರಿಗಳಾಗಿದ್ದರು ಎಂದು ಹಿರಿಯ ಸೇನಾಧಿಕಾರಿಯೋರ್ವರು ತಿಳಿಸಿದರು.
ಸೇನೆಯ ಹೆಲಿಕಾಪ್ಟರ್ ಪತನದ ಸುದ್ದಿಯಿಂದ ವ್ಯಾಕುಲಗೊಂಡಿದ್ದೇನೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟಿಸಿದ್ದಾರೆ. ಕಳೆದ ಏಳು ತಿಂಗಳುಗಳಲ್ಲಿ ಇದು ಜಮ್ಮು-ಕಾಶ್ಮೀರದಲ್ಲಿ ಎರಡನೇ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ಕಳೆದ ತಿಂಗಳು ರಂಜಿತ್ ಸಾಗರ ಜಲಾಶಯದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್ಗಳು ಮೃತಪಟ್ಟಿದ್ದರು. ಅವರ ಪೈಕಿ ಓರ್ವನ ಶವ ಇನ್ನೂ ಪತ್ತೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News