ಕೇರಳ ದೇವಸ್ಥಾನ ಟ್ರಸ್ಟ್ ಲೆಕ್ಕಪರಿಶೋಧನೆ ಎದುರಿಸಬೇಕು: ಸುಪ್ರೀಂ ಕೋರ್ಟ್

Update: 2021-09-22 07:16 GMT

ಹೊಸದಿಲ್ಲಿ: ಪದ್ಮನಾಭಸ್ವಾಮಿ ದೇವಸ್ಥಾನ ಟ್ರಸ್ಟ್ ಕಳೆದ 25 ವರ್ಷಗಳ ಆದಾಯ ಹಾಗೂ ವೆಚ್ಚಗಳ ಲೆಕ್ಕಪರಿಶೋಧನೆಯನ್ನು ಎದುರಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಯು.ಯು. ಲಲಿತ್, ನ್ಯಾಯಮೂರ್ತಿ ಎಸ್.ಆರ್. ಭಟ್ ಮತ್ತು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರ ತ್ರಿಸದಸ್ಯ ಪೀಠವು ಲೆಕ್ಕಪರಿಶೋಧನೆಯು ದೇವಸ್ಥಾನ ಹಾಗೂ  ಟ್ರಸ್ಟ್ ಎರಡರ ಹಣಕಾಸು ಒಳಗೊಂಡಿರಬೇಕು ಹಾಗೂ  ಅದು ಮೂರು ತಿಂಗಳಲ್ಲಿ ನಡೆಯಬೇಕು ಎಂದು ಹೇಳಿದೆ.

ಹಿಂದಿನ ತಿರುವಾಂಕೂರು ರಾಜಮನೆತನದವರು ರಚಿಸಿದ ಪದ್ಮನಾಭ ಸ್ವಾಮಿ ದೇವಸ್ಥಾನ ಟ್ರಸ್ಟ್ ಕಳೆದ ವರ್ಷ ಸುಪ್ರೀಂ ಕೋರ್ಟ್ ಆದೇಶಿಸಿದ ಲೆಕ್ಕಪರಿಶೋಧನೆಯಿಂದ ವಿನಾಯಿತಿ ಕೋರಿ ನ್ಯಾಯಾಲಯದ ಮೊರೆ ಹೋಗಿತ್ತು.

ಕುಟುಂಬವನ್ನು ಒಳಗೊಂಡ ದೇವಾಲಯದ ಪೂಜೆಗಳು ಹಾಗೂ  ಆಚರಣೆಗಳ ಮೇಲ್ವಿಚಾರಣೆ ಮಾಡಲು ಟ್ರಸ್ಟ್ ಅನ್ನು ಸ್ಥಾಪಿಸಲಾಗಿದ್ದು, ಆಡಳಿತದಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ಇದು ದೇವಸ್ಥಾನದಿಂದ ಒಂದು ಪ್ರತ್ಯೇಕ ಘಟಕವಾಗಿದೆ. ಲೆಕ್ಕಪರಿಶೋಧನೆಯಲ್ಲಿ ಸೇರಿಸಲಾಗಿಲ್ಲ ಎಂದು ಟ್ರಸ್ಟ್ ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News