ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ

Update: 2021-09-22 17:32 GMT
photo : PTI

ವಿಶ್ವಸಂಸ್ಥೆ, ಸೆ.22: ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಪ್ರಧಾನಕಚೇರಿಯಲ್ಲಿ ಮಂಗಳವಾರ ನಡೆದ ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಟರ್ಕಿ ಅಧ್ಯಕ್ಷ ರೆಸೆಪ್ ತಯೀಪ್ ಎರ್ದೊಗನ್ ಮತ್ತೆ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಕಾಶ್ಮೀರದಲ್ಲಿ 74 ವರ್ಷದಿಂದ ಮುಂದುವರಿದಿರುವ ಸಮಸ್ಯೆಯನ್ನು , ಸಂಬಂಧಿತ ದೇಶಗಳು ವಿಶ್ವಸಂಸ್ಥೆಯ ನಿರ್ಣಯದ ಚೌಕಟ್ಟಿನೊಳಗೆ ಇತ್ಯರ್ಥಪಡಿಸಿಕೊಳ್ಳಬೇಕು ಎಂಬ ನಿಲುವಿಗೆ ನಮ್ಮ ಬೆಂಬಲವಿದೆ ಎಂದು ಎರ್ದೊಗನ್ ಹೇಳಿದ್ದಾರೆ. ಟರ್ಕಿಯು ಪಾಕಿಸ್ತಾನದ ನಿಕಟ ಮಿತ್ರದೇಶವಾಗಿದೆ.

ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಉಯಿಘಾರ್ ಮುಸ್ಲಿಮ್ ಅಲ್ಪಸಂಖ್ಯಾತರು ಹಾಗೂ ಮ್ಯಾನ್ಮಾರ್‌ನ ರೊಹಿಂಗ್ಯಾಗಳ ಬಗ್ಗೆಯೂ ಎರ್ದೊಗನ್ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ್ದಾರೆ. ಚೀನಾದ ಪ್ರಾದೇಶಿಕ ಸಮಗ್ರತೆಯ ದೃಷ್ಟಿಕೋನದ ಹಿನ್ನೆಲೆಯಲ್ಲಿ ಹೇಳುವುದಾದರೆ, ಮುಸ್ಲಿಮ್ ಉಯಿಗರ್ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನದ ಅಗತ್ಯವಿದೆ . ಇದೇ ವೇಳೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ತಾತ್ಕಾಲಿಕ ಶಿಬಿರದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿರುವ ರೊಹಿಂಗ್ಯಾಗಳ ಸುರಕ್ಷಿತ ಮತ್ತು ಗೌರವಾನ್ವಿತ ರೀತಿಯ ವಾಪಸಾತಿಯನ್ನು ನಾವು ಬೆಂಬಲಿಸುತ್ತೇವೆ ಎಂದು ಎರ್ದೊಗನ್ ಹೇಳಿದ್ದಾರೆ.

ಕಳೆದ ವರ್ಷವೂ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪೂರ್ವದಾಖಲಿತ ಭಾಷಣದಲ್ಲಿ ಎರ್ದೊಗನ್ ಕಾಶ್ಮೀರದ ವಿಷಯವನ್ನು ಉಲ್ಲೇಖಿಸಿದ್ದರು. ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗಲೂ ಈ ವಿಷಯವನ್ನು ಕೆದಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News