ತುಟ್ಟಿಯಾದ ಡೀಸೆಲ್: ಲೀಟರ್ ಗೆ 20 ಪೈಸೆ ಹೆಚ್ಚಳ

Update: 2021-09-24 17:37 GMT

ಹೊಸದಿಲ್ಲಿ, ಸೆ.24: ಡೀಸೆಲ್ ದರ ಶುಕ್ರವಾರ ಪ್ರತಿ ಲೀಟರ್ಗೆ 20 ಪೈಸೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ ಡೀಸೆಲ್ ದರದಲ್ಲಿ ಹೆಚ್ಚಳವಾಗಿರುವುದು ಇದೇ ಮೊದಲ ಸಲವಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ತೈಲ ದರಗಳು 2018ರಿಂದೀಚೆಗೆ ಗರಿಷ್ಠ ಏರಿಕೆಯ ಸನಿಹಕ್ಕೆ ಬಂದಿರುವಂತೆಯೇ ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಇದರೊಂದಿಗೆ ದಿಲ್ಲಿಯಲ್ಲಿ ಡೀಸೆಲ್ ದರ ಪ್ರತಿ ಲೀಟರ್ಗೆ 88.82 ರೂ. ಹಾಗೂ ಮುಂಬೈನಲ್ಲಿ 96.41 ರೂ. ಆಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ತೆಗಳು ತಿ ಳಿಸಿವೆ. ಆದರೆ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪೆಟ್ರೋಲ್ ದರ ರಾಜಧಾನಿ ಹೊಸದಿಲ್ಲಿಯಲ್ಲಿ ಪ್ರತಿ ಲೀಟರ್ಗೆ 109.19 ರೂ. ಆಗಿದ್ದರೆ, ಮುಂಬೈನಲ್ಲಿ 107.26 ರೂ. ಆಗಿದೆ.

ಅಂತರ್ ರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಡೀಸೆಲ್ ಹಾಗೂ ತೈಲ ದರದಲ್ಲಿ ಸೆಪ್ಟೆಂಬರ್ 5ರಂದು ಪರಿಷ್ಕರಿಲಾಗಿದ್ದು, ತೈಲ ದರದಲ್ಲಿ ಬ್ಯಾರೆಲ್ಗೆ 6-7 ಅಮೆರಿಕನ್ ಡಾಲರ್ಗಳಷ್ಟು ಏರಿಕೆಯಾಗಿತ್ತು. ಆದರೆ ವೆಚ್ಚಕ್ಕೆ ಅನುಗುಣವಾಗಿ ತೈಲ ದರಗಳನ್ನು ದಿನಂಪ್ರತಿಯಾಗಿ ಪರಿಷ್ಕರಿಸಬೇಕಾಗಿದ್ದ ತೈಲ ಕಂಪೆನಿಗಳು ಹೆಚ್ಚು ಕಮ್ಮಿ ಮೂರು ತಿಂಗಳುಗಳಿಂದ ತೈಲ ದರದಲ್ಲಿ ಬದಲಾವಣೆ ಮಾಡಿಲ್ಲ. ಇದೀಗ ಅವುದರ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸತೊಡಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News