ಬಿಯರ್ ಮಾರಾಟಕ್ಕೆ ‘ಅಕ್ರಮ ಕೂಟ’: ಯುಬಿಎಲ್, ಕಾರ್ಲ್ಸ್ ಬರ್ಗ್ ಮತ್ತಿತರರಿಗೆ 873 ಕೋಟಿ ರೂ. ದಂಡ

Update: 2021-09-24 18:21 GMT

ಹೊಸದಿಲ್ಲಿ, ಸೆ.24: ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಯರ್ ಮದ್ಯದ ಮಾರಾಟ ಹಾಗೂ ಪೂರೈಕೆಗೆ ಆಕ್ರಮ ಕೂಟ ರಚಿಸಿರುವುದಕ್ಕಾಗಿ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್, ಕಾರ್ಲ್ಸ್ ಬರ್ಗ್ ಇಂಡಿಯಾ, ಅಖಿಲ ಭಾರತ ಮದ್ಯತಯಾರಕರ ಸಂಘ (ಎಐಎಬಿಎ) ಹಾಗೂ ಇತರ ವ್ಯಕ್ತಿಗಳ ವಿರುದ್ಧ 873 ಕೋಟಿ ರೂ.ಗೂ ಅಧಿಕ ಮೊತ್ತದ ದಂಡವನ್ನು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ವಿಧಿಸಿದೆ.

ಮೂರು ಬಿಯರ್ ತಯಾರಕ ಸಂಸ್ಥೆಗಳಾದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (ಯುಬಿಎಲ್), ಎಸ್ಎಬಿ ಮಿಲ್ಲರ್ ಇಂಡಿಯಾ ಲಿಮಿಟೆಟ್ (ಪ್ರಸಕ್ತ ಆ್ಯನ್ಹುಸೆರ್ ಬ್ಯುಶ ಇನ್ ಬೆವ್ ಇಂಡಿಯಾ ಲಿ.) ಹಾಗೂ ಕಾರ್ಲ್ಸ್ಬರ್ಗ್ ಇಂಡಿಯಾ ಪ್ರೈ.ಲಿಮಿಟೆಡ್ (ಸಿಐಪಿಎಲ್) ಎಂಬುದಾಗಿ ಮರುನಾಮಕರಣಗೊಳಿಸಲಾಗಿದೆ. ಭಾರತದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಯರ್ ಮಾರಾಟ ಹಾಗೂ ಪೂರೈಕೆಯನ್ನು ನಿಯಂತ್ರಿಸಲು ಅಕ್ರಮ ಕೂಟ ರಚಿಸಿದ್ದಾರೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಯುಬಿಎಲ್ ಹಾಗೂ ಕಾರ್ಲ್ಸ್ಬರ್ಗ್ ಇಂಡಿಯಾ ಕಂಪೆನಿಗಳಿಗೆ ಕ್ರಮವಾಗಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಸುಮಾರು 752 ಕೋಟಿ ರೂ. ಹಾಗೂ 121 ಕೋಟಿ ರೂ. ದಂಡ ವಿಧಿಸಲಾಗಿದೆ. ಎಐಬಿಎ ಸಂಘಟನೆ ಹಾಗೂ ವಿವಿಧ ವ್ಯಕ್ತಿಗಳಿಗೆ 6.25 ಲಕ್ಷ ರೂ. ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News