ಮಹಾರಾಷ್ಟ್ರದಲ್ಲಿ ಅ. 2ರಿಂದ ಸಿನೆಮಾ ಮಂದಿರ ಆರಂಭ

Update: 2021-09-25 18:00 GMT

ಹೊಸದಿಲ್ಲಿ, ಸೆ. 25: ಮಹಾರಾಷ್ಟ್ರದಲ್ಲಿ ಅಕ್ಟೋಬರ್ 22ರಿಂದ ಎಲ್ಲಾ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.

ಸಿನೆಮಾ ಮಂದಿರಗಳು ತೆರೆದರೆ ಕೋವಿಡ್ ಶಿಷ್ಟಾಚಾರಗಳನ್ನು ಅನುಸರಿಸಬೇಕು. ಈ ಬಗ್ಗೆ ಶಿಷ್ಟಾಚಾರಗಳನ್ನು ರೂಪಿಸಲಾಗುತ್ತಿದೆ. ಶಿಷ್ಟಾಚಾರಗಳು ಶೀಘ್ರ ಬಿಡುಗಡೆಯಾಗಲಿವೆ ಎಂದು ಟ್ವೀಟ್ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಕೋವಿಡ್ ಸೋಂಕಿನ ಪ್ರಕರಣಗಳು ಇತ್ತು. ಲಸಿಕೆ ನೀಡಿಕೆ ಹಾಗೂ ಎಚ್ಚರಿಕೆಯ ಕ್ರಮಗಳಿಂದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಮುಂಬೈಯಲ್ಲಿ ಶೇ. 41 ಜನರು ಕೋವಿಡ್ ಲಸಿಕೆ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ.

ಶೇ. 88 ಜನರು ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ‘‘ನಾವು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳನ್ನು ಅಕ್ಟೋಬರ್ 4ರಿಂದ ಆರಂಭಿಸಲಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ 5ರಿಂದ 12ನೇ ತರಗತಿ ವರೆಗೆ ತರಗತಿಗಳು ನಡೆಯಲಿವೆ. ನಗರಗಳಲ್ಲಿ 8ರಿಂದ 12ನೇ ತರಗತಿ ವರೆಗೆ ತರಗತಿ ನಡೆಯಲಿವೆ. ಈ ನಿರ್ಧಾರಕ್ಕೆ ಬರುವ ಮುನ್ನ ನಾವು ಕೋವಿಡ್ ಕುರಿತ ಕ್ಷಿಪ್ರ ಕಾರ್ಯಪಡೆಯೊಂದಿಗೆ ಚರ್ಚೆ ನಡೆಸಿದ್ದೇವೆ. ಅವರಿಂದ ಅಭಿಪ್ರಾಯ ಪಡೆದುಕೊಂಡಿದ್ದೇವೆ ಹಾಗೂ ಅದನ್ನು ಸರಕಾರದ ನಿಲುವಳಿಯಲ್ಲೇ ಸೇರಿಸಿದ್ದೇವೆ. ಆರೋಗ್ಯ ಇಲಾಖೆಯ ಅನುಮತಿಯನ್ನು ಕೂಡ ಪಡೆದುಕೊಂಡಿದ್ದೇವೆ. ಮುಖ್ಯಮಂತ್ರಿ ಅವರು ಕೂಡ ನಮಗೆ ಇಂದು ಅನುಮತಿ ನೀಡಿದ್ದಾರೆ’’ ಎಂದು ರಾಜ್ಯ ಶಿಕ್ಷಣ ಸಚಿವೆ ವರ್ಷಾ ಗಾಯಕ್‌ವಾಡ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News