ಇಟಲಿಯಲ್ಲಿ ಶಾಂತಿ ಸಭೆಗೆ ಹಾಜರಾಗಲು ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ ಎಂದ ಮಮತಾ ಬ್ಯಾನರ್ಜಿ

Update: 2021-09-25 18:28 GMT

ಕೋಲ್ಕತಾ: ರೋಮ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ.  ಇಟಾಲಿಯನ್ ಸರಕಾರದಿಂದ ನನಗೆ ಆಮಂತ್ರಣ ಲಭಿಸಿತ್ತು  ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ ಎಂದು  ಎಬಿಪಿ ನ್ಯೂಸ್ ವರದಿ ಮಾಡಿದೆ.

"ರೋಮ್‌ನಲ್ಲಿ ಜಾಗತಿಕ ಶಾಂತಿ ಕುರಿತು ಸಭೆ ಇತ್ತು ... ಇಟಲಿ ಸರಕಾರವು ನನಗೆ ವಿಶೇಷ ಅನುಮತಿಯನ್ನು ನೀಡಿತು. ಆದರೆ ಕೇಂದ್ರವು ನನ್ನ ಪ್ರವಾಸವನ್ನು ರದ್ದುಗೊಳಿಸಿತು. ಒಬ್ಬ ಮುಖ್ಯಮಂತ್ರಿ ಇಂತಹ ಪ್ರವಾಸಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಅವರು ನನಗೆ ಹೇಳಿದರು. ಅವರು ನನ್ನನ್ನು ಎಲ್ಲಿಗೂ ಹೋಗದಂತೆ ತಡೆಯುತ್ತಾರೆ’’ಎಂದು ಬ್ಯಾನರ್ಜಿ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.

ಅನುಮತಿಯನ್ನು ಕೇಂದ್ರ ವಿದೇಶಾಂಗ ಸಚಿವಾಲಯ ನಿರಾಕರಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News