"ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆ ಆಗಬಹುದಾದರೆ, ಸೋನಿಯಾ ಭಾರತದ ಪ್ರಧಾನಿಯಾಗುವುದು ಯಾಕೆ ಸಾಧ್ಯವಿಲ್ಲ"

Update: 2021-09-26 18:32 GMT
photo: The indian express

ಇಂದೋರ್,ಸೆ.27: 2004ರಲ್ಲಿ ಯುಪಿಎ ಸರಕಾರದ ಕೇಂದ್ರದಲ್ಲಿ ಅಧಿಕಾರಕ್ಕೇರಿದಾಗ ಸೋನಿಯಾಗಾಂಧಿಯವರು ಪ್ರಧಾನಿಯಾಗಬೇಕಿತ್ತು ಎಂದು ಕೇಂದ್ರ ಗೃಹ ಸಚಿವ ರಾಮದಾಸ್ ಅಠಾವಳೆ ಅಭಿಪ್ರಾಯಿಸಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬೆಳೆಯಲಾರದು ಎಂದರು.

ಇಂದೋರ್ನಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಸೋನಿಯಾಗಾಂಧಿ ಅವರು ಲೋಕಸಭೆಗೆ ಆಯ್ಕೆಯಾದಾಗ, ಸೋನಿಯಾ ಅವರನ್ನು ಪ್ರಧಾನಿ ಮಾಡಬೇಕೆಂದು ನಾನು ಯುಪಿಎ ನಾಯಕರ ಮುಂದೆ ಪ್ರಸ್ತಾವಿಸಿದ್ದೆ. ಕಾಂಗ್ರೆಸ್ ಲೋಕಸಭೆಯಲ್ಲಿ ಬಹುಮತ ಹೊಂದಿದ್ದಾಗ ಪ್ರಧಾನಿ ಸ್ಥಾನಕ್ಕೆ ಸೋನಿಯಾ ಅರ್ಹ ಅಭ್ಯರ್ಥಿಯಾಗಿದ್ದರು. ಆದರೆ, ಈಗ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಬೆಳೆಯಲಾರದು ಎಂದು ಅಭಿಪ್ರಾಯಿಸಿದರು.

‘‘ಕಮಲಾ ಹ್ಯಾರಿಸ್ ಅವರು ಅಮೆರಿಕದ ಉಪಾಧ್ಯಕ್ಷೆ ಆಗಬಹುದಾದರೆ, ಭಾರತದ ಪ್ರಜೆ ಹಾಗೂ ಪ್ರಧಾನಿ ಮತ್ತು ಚುನಾಯಿತ ಸಂಸದ ರಾಜೀವ್ ಗಾಂಧಿಯವರ ಪತ್ನಿಯಾದ ಸೋನಿಯಾಗಾಂಧಿ ಯಾಕೆ ಪ್ರಧಾನಿಯಾಗಕೂಡದು’’ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಸಹಾಯಕ ಸಚಿವ ಹಾಗೂ ಭಾರತೀಯ ರಿಪಬ್ಲಿಕನ್ ಪಕ್ಷ (ಆರ್ಪಿಐ)ದ ಅಧ್ಯಕ್ಷರೂ ಆಗಿರುವ ಅಠವಳೆ ಅವರು ಹೇಳಿದರು. ಆರ್ಪಿಐ ಬಿಜೆಪಿ ನೇತೃತ್ವದ ಎನ್ಡಿ ಮೈತ್ರಿಕೂಟದಲ್ಲಿ ಅಂಗಪಕ್ಷವಾಗಿದೆ.

ಒಂದು ವೇಳೆ ಪ್ರಧಾನಿ ಹುದ್ದೆಯನ್ನು ಸ್ವೀಕರಿಸಲು ಸೋನಿಯಾಗಾಂಧಿ ಒಪ್ಪದೇ ಇದ್ದಲ್ಲಿ ಮನಮೋಹನ್ಸಿಂಗ್ ಬದಲಿಗೆ ಮುಂದಿನ ಅತ್ಯಂತ ಯೋಗ್ಯ ವ್ಯಕ್ತಿಯಾದ ಶರದ್ ಪವಾರ್ ಅವರನ್ನು ಪ್ರಧಾನಿಯಾಗಿ ನೇಮಿಸಹೇಕಿತ್ತು ಎಂದವರು ಹೇಳಿದರು.

‘‘ ಈ ಹಿಂದೆ ಮನಮೋಹನ್ಸಿಂಗ್ ಬದಲಿಗೆ ಶರದ್ ಪವಾರ್ ಅವರನ್ನು ಪ್ರಧಾನಿಯಾಗಿ ಮಾಡಿದ್ದಲ್ಲಿ ಕಾಂಗ್ರೆಸ್ನ ಪರಿಸ್ಥಿತಿ ಈಗ ಇಷ್ಟೊಂದು ಕೆಟ್ಟದಾಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷವು ಪವಾರ್ ಅವರನ್ನು ಹಲವಾರು ಬಾರಿ ಅವಮಾನಿಸಿತ್ತು’’ ಎಂದು ಅಠವಳೆ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಪರಸ್ಪರ ಕೈಚೋಡಿಸಿ ಆರ್ಪಿಐ ಬೆಂಬಲದೊಂದಿಗೆ ಸಮ್ಮಿಶ್ರ ಸರಕಾರ ರಚಿಸಬೇಕೆಂದು ಅಠವಳೆ ಸಲಹೆ ನೀಡಿದರು.ಮೈತ್ರಿಕೂಟ ರಚನೆಯ ಪ್ರಸ್ತಾವವನ್ನು ತಾನು ಶಿವಸೇನಾದ ಮುಂದೆಯೂ ಪ್ರಸ್ತಾವಿಸಿರುವುದಾಗಿ ಅಠವಳೆ ಇತಳಿಸಿದರು.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಶಿವಸೇನಾದೆಡೆಗೆ ಗುರಿಯಿಡುತ್ತಿದೆ. ಹೀಗಾಗಿ ಶಿವಸೇನಾವು ನಮ್ಮ ಪಕ್ಷದೊಂದಿಗೆ ಮೈತ್ರಿ ಕೂಟವನ್ನು ರಚಿಸಬಹುದಾಗಿದೆ. ಉದ್ಧವ್ಠಾಕ್ರೆ ಹಾಗೂ ಫಡ್ನವೀಸ್ ತಲಾ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಬೇಕಾಗುತ್ತದೆ. ಒಂದು ವೇಳೆ ಅವರು ಒಪ್ಪದೇ ಇದ್ದಲ್ಲಿ ನಾನು ಮುಖ್ಯಮತ್ರಿಯಾಗಬಹುದಾಗಿದೆ’’ ಎಂದು ಅಠವಳೆ ತಿಳಿಸಿದರು.

ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರೀಂದರ್ಸಿಂಗ್ ಅವರು ಬಿಜೆಪಿ ನೇತೃತ್ವದ ಎನ್ ಡಿಎಗೆ ಸೇರ್ಪಡೆಗೊಳ್ಳಿದ್ದಾರೆಂಬ ಊಹಾಪೋಹಗಳ ಬಗ್ಗೆ ಉತ್ತರಿಸಿದ ಅವರು ಅಮರೀಂದರ್ ಅವರನ್ನು ಕಳೆದ ಕೆಲವು ದಿನಗಳಿಂದ ಪಂಜಾಬ್ ಕಾಂಗ್ರೆಸ್ ಅಪಮಾನಿಸಿದ್ದರಿಂದಾಗಿ ನೊಂದ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಹೇಳಿದರು. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳುವಂತೆ ತಾನು ಅಮರೀಂದರ್ ಅವರಿಗೆ ಮನವಿ ಮಾಡುವುದಾಗಿಯೂ ಅಠವಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News