ಶಿಕ್ಷಕರ ಪರೀಕ್ಷೆಗೆ ಮುನ್ನ ರಾಜಸ್ಥಾನದ 16 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸ್ಥಗಿತ

Update: 2021-09-26 06:12 GMT

ಜೈಪುರ: ಸರಕಾರಿ ಶಾಲೆಗಳ ಶಿಕ್ಷಕರನ್ನು ಆಯ್ಕೆ ಮಾಡಲು ರಾಜ್ಯವು ಮಹತ್ವದ ಪರೀಕ್ಷೆಯನ್ನು ನಡೆಸುತ್ತಿರುವುದರಿಂದ ರಾಜಸ್ಥಾನದ 16 ಜಿಲ್ಲೆಗಳಲ್ಲಿ ಇಂದು 12 ಗಂಟೆಗಳ ಕಾಲ ಮೊಬೈಲ್ ಇಂಟರ್ನೆಟ್ ಹಾಗೂ  ಎಸ್‌ಎಂಎಸ್‌ಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿದೆ. ಪರೀಕ್ಷೆಯಲ್ಲಿ ವಂಚನೆ ತಡೆಯಲು ಈ ಕ್ರಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ 31,000 ಹುದ್ದೆಗಳಿಗಾಗಿ  ಸುಮಾರು 16 ಲಕ್ಷ ಆಕಾಂಕ್ಷಿಗಳು ಅತ್ಯಂತ ಸ್ಪರ್ಧಾತ್ಮಕ ರಾಜಸ್ಥಾನ ಅರ್ಹತಾ ಪರೀಕ್ಷೆಯು (ರೀಟ್) ಯನ್ನು ಬರೆಯಲು ಪ್ರಯತ್ನಿಸುತ್ತಿದ್ದಾರೆ

ಇಂಟರ್ ನೆಟ್ ಸಂಪರ್ಕ ಕಡಿತಗೊಂಡಿರುವ ಜಿಲ್ಲೆಗಳೆಂದರೆ:  ಜೈಪುರ, ಉದಯಪುರ, ಭಿಲ್ವಾರ, ಅಲ್ವಾರ್, ಬಿಕಾನೇರ್, ದೌಸಾ, ಚಿತ್ತೋರ್‌ಗಡ, ಬಾರ್ಮರ್, ಟೊಂಕ್, ಅಜ್ಮೀರ್, ನಾಗೌರ್, ಸವಾಯಿ ಮಾಧೋಪುರ, ಕೋಟ, ಬಂಡಿ ಮತ್ತು ಜಲವಾರ್ - ಸಿಕಾರ್.

ರಾಜಸ್ಥಾನದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಒಬ್ಬ ವ್ಯಕ್ತಿ REET ಉತ್ತೀರ್ಣನಾಗಬೇಕು.

REET ತೆಗೆದುಕೊಳ್ಳಲು ನಿಗದಿಯಾಗಿರುವ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರಕಾರವು ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಪ್ರಯಾಣಕ್ಕಾಗಿ ವಿಸ್ತೃತವಾದ ವ್ಯವಸ್ಥೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News