ಹೊಸದಿಲ್ಲಿಗೆ ಹಿಂದಿರುಗಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

Update: 2021-09-26 08:50 GMT

ಹೊಸದಿಲ್ಲಿ: ಮೂರು ದಿನಗಳ ಅಮೆರಿಕಾ ಪ್ರವಾಸದ ನಂತರ ರವಿವಾರ ದೇಶಕ್ಕೆ ಬಂದಿಳಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯಿಂದ ಭವ್ಯ ಸ್ವಾಗತವನ್ನು ಪಡೆದರು.

ಅಮೆರಿಕ ಪ್ರವಾಸದ ವೇಳೆ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದರು ಹಾಗೂ  ಕ್ವಾಡ್ ಶೃಂಗಸಭೆಯಲ್ಲೂ ಭಾಗವಹಿಸಿದ್ದರು.

ಪ್ರಧಾನಿ ಮೋದಿಗೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ಹಾಗೂ  ತರುಣ್ ಚುಘ್, ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್ ಅವರು ದಿಲ್ಲಿ ವಿಮಾನ ನಿಲ್ದಾಣದಲ್ಲಿ 'ಡೋಲ್' (ಡಬಲ್ ಸೈಡೆಡ್ ಬ್ಯಾರೆಲ್ ಡ್ರಮ್) ಬಡಿತಗಳ ನಡುವೆ ಶಾಲು ಹಾಗೂ ಹೂಗುಚ್ಛಗಳನ್ನು ನೀಡಿ ಸ್ವಾಗತಿಸಿದರು.

ನಂತರ ಅವರನ್ನು ವಿಮಾನ ನಿಲ್ದಾಣ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ವೇದಿಕೆಗೆ 'ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಬೃಹತ್ ಹೂಮಾಲೆ ಹಾಕಲಾಯಿತು.

"ಪ್ರಧಾನಿ ಮೋದಿಯವರ ಅಮೆರಿಕಾ ಭೇಟಿಯು ಮೋದಿಯವರ ನಾಯಕತ್ವದಲ್ಲಿ ಜಗತ್ತು ಭಾರತವನ್ನು ವಿಭಿನ್ನವಾಗಿ ನೋಡುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ. ಭಯೋತ್ಪಾದನೆ, ಹವಾಮಾನ ಬದಲಾವಣೆ ಹಾಗೂ  ಪ್ರತಿಯೊಬ್ಬರ ಭಾಗವಹಿಸುವಿಕೆಯೊಂದಿಗೆ ಹೇಗೆ ಪರಿಹಾರವನ್ನು ತರಬಹುದು ಎಂಬುದರ ಕುರಿತು ಚರ್ಚಿಸುವ ಮೂಲಕ ಭಾರತವನ್ನು ಜಾಗತಿಕ ಆಟಗಾರನಾಗಿ ಅವರು ಸ್ಥಾಪಿಸಿದ್ದಾರೆ. ಕೋಟಿಗಟ್ಟಲೆ ಭಾರತೀಯರ ಪರವಾಗಿ ನಾವು ಅವರನ್ನು ಮರಳಿ ಸ್ವಾಗತಿಸುತ್ತೇವೆ’’ ಎಂದು ನಡ್ಡಾ ವಿಮಾನ ನಿಲ್ದಾಣದ ಬಳಿ ನಡೆದ ಸಮಾರಂಭದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News