ದಿಲ್ಲಿ ಹಿಂಸಾಚಾರ ಪ್ರಕರಣ: ವಿಚಾರಣೆಗೆ ಹಾಜರಾಗದ ಪೊಲೀಸ್ ಅಧಿಕಾರಿಯ ವೇತನದಿಂದ 5,000ರೂ. ಕಡಿತಗೊಳಿಸಲು ಕೋರ್ಟ್ ಆದೇಶ

Update: 2021-09-29 07:51 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕಳೆದ ವರ್ಷದ ಫೆಬ್ರವರಿಯಲ್ಲಿ  ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದಷ್ಟೇ ಅಲ್ಲದೆ ಪ್ರಕರಣದ ವಿಚಾರಣೆಯನ್ನು ಮುಂದೂಡಲು ಮನವಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ನಗರ ಪೊಲೀಸ್ ಆಯುಕ್ತರಿಗೆ ತನಿಖೆ ನಡೆಸುವಂತೆ ಸೂಚಿಸಿದೆಯಲ್ಲದೆ ಸಂಬಂಧಿತ ಅಧಿಕಾರಿಯ ವೇತನದಿಂದ ರೂ 5000 ಕಡಿತಗೊಳಿಸುವಂತೆಯೂ ಸೂಚಿಸಿದೆ.

ವಿಶೇಷ ಸಾರ್ವಜನಿಕ ಅಭಿಯೋಜಕರು ಹಾಗೂ ತನಿಖಾಧಿಕಾರಿಗಳು ನಿಗದಿತ ದಿನಾಂಕಗಳಂದು ತನಿಖೆಗೆ ಹಾಜರಾಗುತ್ತಿಲ್ಲ ಹಾಗೂ ಹಿರಿಯ ಅಧಿಕಾರಿಗಳ ಎಚ್ಚರಿಕೆಯ ನಂತರ ಹಾಜರಾದರೂ ಕಡತಗಳನ್ನು ಸರಿಯಾಗಿ ಪರಾಮರ್ಶಿಸದೆ ಆಗಮಿಸುತ್ತಾರೆ ಹಾಗೂ ನಂತರ ಸಹಜವೆಂಬಂತೆ ವಿಚಾರಣೆ ಮುಂದೂಡುವಂತೆ ಕೋರುತ್ತಾರೆ ಎಂದು ಮೇಲಿನ ಆದೇಶ ನೀಡುವ ವೇಳೆ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ಅರುಣ್ ಕುಮಾರ್ ಗರ್ಗ್ ಹೇಳಿದರು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗೆ ಆರೋಪಿಗಳ ಪೈಕಿ ಒಬ್ಬನಿಗೆ ಇ-ಚಲನ್  ಒದಗಿಸುವಂತೆ  ನ್ಯಾಯಾಲಯ ಸೂಚಿಸಿದ್ದರೂ ನ್ಯಾಯಾಲಯದ ಎಪ್ರಿಲ್ 12ರ ಆದೇಶದ ಕುರಿತು ತನಗೆ ತಿಳಿದಿರಲಿಲ್ಲವಾದುದರಿಂದ  ಮಿಶ್ರಾಗೆ ದಾಖಲೆಯನ್ನು ಒದಗಿಸಲಾಗಿರಲಿಲ್ಲ ಎಂದು ಹೇಳಿ ಪ್ರಕರಣ ವಿಚಾರಣೆ ಮುಂದೂಡುವಂತೆ ಅಧಿಕಾರಿ ಕೋರಿದ್ದರು.

ಪ್ರಕರಣದ ವಿಚಾರಣೆ ಮುಂದೂಡಲು ಒಪ್ಪಿದ ನ್ಯಾಯಾಲಯ ಅದೇ ಸಮಯ ಸಂಬಂಧಿತ ಅಧಿಕಾರಿಯ ವೇತನದಿಂದ ರೂ 5,000 ಕಡಿತಗೊಳಿಸಬೇಕು ಹಾಗೂ ಅದನ್ನು ಪ್ರಧಾನಿಯ ರಾಷ್ಟ್ರೀಯ ಪರಿಹಾರ ನಿಧಿಗೆ ಜಮೆ ಮಾಡಬೇಕು ಎಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News