×
Ad

ಕಪಿಲ್ ಸಿಬಲ್ ಮನೆಯ ಹೊರಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ, ಕಾರಿಗೆ ಹಾನಿ

Update: 2021-09-29 20:26 IST
photo: twitter screengrab 

ಹೊಸದಿಲ್ಲಿ: ಯುವ ಕಾಂಗ್ರೆಸ್ ಕಾರ್ಯಕರ್ತರು ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಮನೆಯ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ "ಜಿ -23, ಜಿ ಹುಜೂರ್ -23 ಅಲ್ಲ" ಕಾಮೆಂಟ್ ಮೂಲಕ ಪಕ್ಷದ ನಾಯಕತ್ವವನ್ನು ನಿಂದಿಸಿದ ತಕ್ಷಣ ಪಕ್ಷದ ಕಾರ್ಯಕರ್ತರು ಅವರ ಮನೆಯ ಹೊರಗೆ ಜಮಾಯಿಸಿ 'ಬೇಗ ಗುಣಮುಖರಾಗಿ' ಎಂಬ ಘೋಷಣಾ ಫಲಕಗಳೊಂದಿಗೆ ಪ್ರತಿಭಟಿಸಿದರು ಹಾಗೂ  ಅವರ ಕಾರನ್ನು ಹಾನಿಗೊಳಿಸಿದರು.

ಯುವ ಕಾಂಗ್ರೆಸ್‌ನ ಕಾರ್ಯಕರ್ತರು  'ಪಕ್ಷವನ್ನು ತೊರೆಯಿರಿ! ನಿಮ್ಮ ಪ್ರಜ್ಞೆಗೆ ಬನ್ನಿ!' ಹಾಗೂ  'ರಾಹುಲ್ ಗಾಂಧಿ ಜಿಂದಾಬಾದ್!ಎಂದು ಘೋಷಣೆ ಕೂಗಿದರು.

ಇಂದು ಪಂಜಾಬ್ ರಾಜಕೀಯ ಬಿಕ್ಕಟ್ಟಿನ ಕುರಿತು ಮಾತನಾಡಿದ್ದ ಕಪಿಲ್ ಸಿಬಲ್, "ಕಾಂಗ್ರೆಸ್ ನಲ್ಲಿ ಈಗ ಚುನಾಯಿತ ಅಧ್ಯಕ್ಷರಿಲ್ಲ. ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದು ನಮಗೆ ಗೊತ್ತಿಲ್ಲ. ನಾವು  ಜಿ -23, ಖಂಡಿತವಾಗಿಯೂ ಜಿ ಹುಜೂರ್ -23 ಅಲ್ಲ. ನಾವು ಸಮಸ್ಯೆಗಳನ್ನು ಎತ್ತುತ್ತಲೇ ಇರುತ್ತೇವೆ" ಎಂದು ಹೇಳಿದ್ದರು.

ಪಕ್ಷದಲ್ಲಿ ವ್ಯಾಪಕ ಬದಲಾವಣೆಗಳು ಹಾಗೂ  'ದೂರದೃಷ್ಟಿಯುಳ್ಳ ನಾಯಕತ್ವ'ದ ಬೇಡಿಕೆ ಇಟ್ಟು ಕಳೆದ ವರ್ಷ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ 23 ನಾಯಕರ ಗುಂಪಿನಲ್ಲಿ ಸಿಬಲ್ ಕೂಡ ಒಬ್ಬರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News