×
Ad

'ನವಜೋತ್ ಸಿಧು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಉಳಿಯುತ್ತಾರೆ, ಶೀಘ್ರದಲ್ಲೇ ಸಮಸ್ಯೆ ಪರಿಹಾರ': ಮುಸ್ತಫಾ

Update: 2021-09-30 10:59 IST

ಹೊಸದಿಲ್ಲಿ: ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಉಳಿಯಲಿದ್ದು, ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸಲಿದ್ದಾರೆ ಎಂದು ಅವರ ಸಲಹೆಗಾರ ಇಂದು ಹೇಳಿದ್ದು,  ಅವರ ಸಲಹೆಗಾರನ ಹೇಳಿಕೆಯಿಂದಾಗಿ ಸಿಧು  ರಾಜೀನಾಮೆಯಿಂದ ಹಿಂದೆ ಸರಿಯಬಹುದು ಎಂಬ ಸೂಚನೆ ಲಭಿಸಿದೆ.

"ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುತ್ತದೆ. ನವಜೋತ್ ಸಿಧು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ" ಎಂದು ನವಜೋತ್ ಸಿಧು  ಅವರ ಸಲಹೆಗಾರ ಮೊಹಮ್ಮದ್ ಮುಸ್ತಫಾ NDTVಗೆ ತಿಳಿಸಿದರು.

"ಕಾಂಗ್ರೆಸ್ ನಾಯಕತ್ವವು ನವಜೋತ್ ಸಿಧುವನ್ನು ಅರ್ಥ ಮಾಡಿಕೊಂಡಿದೆ ಹಾಗೂ  ಸಿಧು ಕಾಂಗ್ರೆಸ್ ನಾಯಕತ್ವವನ್ನು ಮೀರಿಲ್ಲ. ಅವರು ಅಮರಿಂದರ್ ಸಿಂಗ್ ಅಲ್ಲ, ಸಿಂಗ್ ಅವರು ಎಂದಿಗೂ ಕಾಂಗ್ರೆಸ್ ಹಾಗೂ  ಅದರ ನಾಯಕತ್ವದ ಕುರಿತು  ಕಾಳಜಿ ವಹಿಸಲಿಲ್ಲ" ಎಂದು ಮುಸ್ತಫಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News