ಜಗತ್ತಿನ ಜನರ ಸರಾಸರಿ ಎತ್ತರದಲ್ಲಿ ಹೆಚ್ಚಳ; ಭಾರತೀಯರ ಎತ್ತರದಲ್ಲಿ ಕುಸಿತ!

Update: 2021-09-30 17:23 GMT

ನ್ಯೂಯಾರ್ಕ್, ಸೆ.30: ಜಗತ್ತಿನಾದ್ಯಂತ ಜನರ ಸರಾಸರಿ ಎತ್ತರದಲ್ಲಿ ಹೆಚ್ಚಳ ಕಂಡುಬಂದಿದ್ದರೆ, ಭಾರತೀಯರ ಸರಾಸರಿ ಎತ್ತರದಲ್ಲಿ ಇಳಿಕೆಯುಂಟಾಗಿದೆ ಎಂದು ಸೆಪ್ಟೆಂಬರ್ 17ರಂದು ಪ್ರಕಟವಾದ ಸಂಶೋಧನಾ ವರದಿಯೊಂದು ತಿಳಿಸಿದೆ.

1988ರಿಂದ 2015ರವರೆಗೆ ಭಾರತದಲ್ಲಿ ವಯಸ್ಕರ ಎತ್ತರದ ಪ್ರವೃತ್ತಿಗಳು: ರಾಷ್ಟ್ರೀಯ ಕುಟುಂಬ ಹಾಗೂ ಆರೋಗ್ಯ ಸಮೀಕ್ಷೆ’ (ಎನ್ಎಫ್ಎಚ್ಎಸ್) ಎಂಬ ಹೆಸರಿನ ಈ ಸಮೀಕ್ಷಾ ವರದಿಯು 15-20 ಹಾಗೂ 26-50 ವರ್ಷ ವಯೋಮಾನದ ಗುಂಪಿನ ಭಾರತೀಯ ಪುರುಷರು ಹಾಗೂ ಮಹಿಳೆಯರ ದೈಹಿಕ ಎತ್ತರದಲ್ಲಿನ ಪ್ರವೃತ್ತಿಗಳನ್ನು ಈ ಸಂಶೋಧನಾ ವರದಿಯು ಅಧ್ಯಯನ ಮಾಡಿದೆ. ರಾಷ್ಟ್ರೀಯ ಕುಟುಂಬ ಹಾಗೂ ಆರೋಗ್ಯ ಸಮೀಕ್ಷೆಗಳನ್ನು ಈ ಅಧ್ಯಯನ ವರದಿ ಅವಲಂಭಿಸಿದೆ.

ಇದೊಂದು ಕಳವಳಕಾರಿ ಪರಿಸ್ಥಿತಿಯಾಗಿದೆ. ಎತ್ತರವು ಪೌಷ್ಟಿಕತೆಯ ಹಾಗೂ ಸಾರ್ವಜನಿಕ ಆರೋಗ್ಯದ ಅತ್ಯಂತ ಮೂಲಭೂತ ಸೂಚಕಗಳಾಗಿದ್ದು, ದೇಶದ ಜನತೆಯ ಜೀವನಮಟ್ಟದ ಜೊತೆ ನೇರವಾಗಿ ನಂಟನ್ನು ಹೊಂದಿದೆ. ಅದಾಯ ಹಾಗೂ ಜಾತಿಯಂತಹ ಆರ್ಥಿಕ ಹಾಗೂ ಸಾಮಾಜಿಕ ಅಂಶಗಳನ್ನು ಕೂಡಾ ಅದು ಪ್ರತಿಬಿಂಬಿಸುತ್ತದೆ. ಪ್ರಜೆಗಳ ಸರಾಸರಿ ಎತ್ತರದಲ್ಲಿನ ಕುಸಿತವು ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಹಾಗೂ ಆರ್ಥಿಕ ಗುರಿಗಳು ಹಿನ್ನಡೆಯನ್ನು ಸಾಧಿಸುತ್ತಿರುವುದನ್ನು ಸೂಚಿಸುತ್ತವೆ ಎಂದು ವರದಿ ಹೇಳಿದೆ.

ಜಗತ್ತಿನಾದ್ಯಂತ ಜನರ ಎತ್ತರದಲ್ಲಿ ಸರಾಸರಿ ಹೆಚ್ಚಳವಾಗಿರುವುದು ಹಾಗೂ ಭಾರತೀಯ ವಯಸ್ಕರ ಸರಾಸರಿ ಎತ್ತರದಲ್ಲಿ ಇಳಿಕೆಯಾಗಿರುವುದು ಕಳವಳಕಾರಿಯಾಗಿದ್ದು, ಈ ಬಗ್ಗೆ ತುರ್ತು ತನಿಖೆ ನಡೆಯಬೇಕಾಗಿದೆ ಎಂದು ಈ ಅಧ್ಯಯನ ವರದಿ ಹೇಳಿದೆ. ಜವಾಹರಲಾಲ್ ನೆಹರೂ ವಿವಿಯ ಸಾಮಾಜಿಕ ಔಷಧಿ ಹಾಗೂ ಸಾಮುದಾಯಿಕ ಆರೋಗ್ಯ ಕುರಿತ ಕೇಂದ್ರದ ತಜ್ಞರಾದ ಕೃಷ್ಣ ಕುಮಾರ್ ಚೌಧುರಿ, ಸಯನ್ದಾಸ್ ಹಾಗೂ ಪ್ರಾಚಿನ್ ಕುಮಾರ್ ಘೋಡಜ್ಕಾರ್ ಈ ಅಧ್ಯಯನ ವರದಿಯನ್ನು ರಚಿಸಿದ್ದಾರೆ.

ವರ್ಷಗಳಿಂದ ಭಾರತೀಯ ಎತ್ತರದಲ್ಲಿನ ಸರಾಸರಿ ಎತ್ತರದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಪರಿಶೀಲನೆ ನಡೆಸಲು ಎನ್ಎಫ್ಎಚ್ಎಸ್-II (1998-99), III (2005-06), IV (2005-16)    ಹೀಗೆ ಮೂರು ಸಮೀಕ್ಷೆಗಳನ್ನು ನಡೆಸಲಾಗಿತ್ತು.

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ನೇತೃತ್ವದಲ್ಲಿ ಎನ್ಎಫ್ಎಚ್ಸಿ ಸಮೀಕ್ಷೆಯನ್ನು ನಡೆಸಲಾಗಿದೆ.

ಎನ್ಎಫ್ಎಚ್ಎಸ್- III (2005-06) IV (2005-16)    ಹಾಗೂ ಎನ್ಎಫ್ಎಚ್ಎಸ್ ಸಮೀಕ್ಷೆಗಳ ನಡುವಿನ ಅವಧಿಯಲ್ಲಿ 26-50 ವರ್ಷ ವಯೋಮಾನದ ಮಹಿಳೆಯರನ್ನು ಹೊರತುಪಡಿಸಿ 15-50 ವಯೋಮಾನದ ಭಾರತೀಯರು ಎತ್ತರದಲ್ಲಿ ಕುಸಿತ ಕಂಡುಬಂದಿದೆಯೆಂದು ವರದಿ ತಿಳಿಸಿದೆ.

15-25 ವರ್ಷ ವಯೋಮಾನದ ಮಹಿಳೆಯರ ಎತ್ರದಲ್ಲಿ 0.12 ಸೆಂ.ಮೀ. ಇಳಿಕೆಯಾಗಿದ್ದರೆ, 26-50 ವರ್ಷ ವಯೋಮಾನದ ಮಹಿಳೆಯರ ಎತ್ತರದಲ್ಲಿ ಸರಾಸರಿ 9.13 ಸೆಂ.ಮೀ. ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ 15-25 ವರ್ಷ ವಯೋಮಾನದ ಪುರುಷರ ಸರಾಸರಿ ಎತ್ತರದಲ್ಲಿ 1.10 ಸೆಂ.ಮೀ. ಕುಸಿತ ಕಂಡುಬಂದಿದೆ. 26-50 ವರ್ಷ ವಯೋಮಾನದವರಲ್ಲಿ 0.86 ಸೆಂ.ಮೀ. ಇಳಿಕೆಯುಂಟಾಗಿದೆ ಎಂದು ಎನ್ಎಫ್ಎಚ್ಎಸ್ ಸಮೀಕ್ಷಾ ವರದಿ ತಿಳಿಸಿದೆ.

ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳ ಎತ್ತರದಲ್ಲಿ ಕುಸಿತ ಹೆಚ್ಚು ಕಂಡುಬಂದಿದೆ. ಎನ್ಎಫ್ಎಚ್ಎಸ್- III• IV     ಹಾಗೂ ಎನ್ಎಫ್ಎಚ್ಎಸ್ ಸಮೀಕ್ಷೆಗಳ ನಡುವಿನ ಅವಧಿಯಲ್ಲಿ 15-25 ವರ್ಷ ವಯೋಮಾನದ ಬುಡಕಟ್ಟು ಮಹಿಳೆಯರ ಸರಾಸರಿ ಎತ್ತರದಲ್ಲಿ 0.42 ಸೆಂ.ಮೀ. ಕುಸಿತವುಂಟಾಗಿದೆ. ಕಡುಬಡ ಕುಟುಂಬಗಳಿಗೆ ಸೇರಿದ ಮಹಿಳೆಯರ ಎತ್ತರದಲ್ಲಿ 0.63 ಸೆಂ.ಮೀ. ಇಳಿಕೆಯಾಗಿದೆ. ಸಮಗ್ರ ವಯೋಮಾನದ ಗುಂಪಿನವರ ಎತ್ತರದಲ್ಲಿ ಅ ಸರಾಸರಿ ಕುಸಿತಕ್ಕಿಂತಲೂ ಹೆಚ್ಚು ಇಳಿಕೆ ಈ ವರ್ಗದವರಲ್ಲಿ ಕಂಡುಬಂದಿದೆ.

26-50 ವಯೋಮಾನಕ್ಕೆ ಸೇರಿದ ಕಡುಬಂಡ ಕುಟುಂಬದ ಮಹಿಳೆಯರ ಸರಾಸರಿ ಎತ್ತರದಲ್ಲಿ 0.57 ಸೆಂ.ಮೀ. ಇಳಿಕೆಯುಂಟಾಗಿದೆ. ಆದರೆ ಮಧ್ಯಮ, ಶ್ರೀಮಂತ ಹಾಗೂ ಅತ್ಯಂತ ಶ್ರೀಮಂತರ ಕುಟುಂಬಗಳ ಮಹಿಳೆಯರ ಎತ್ತರದಲ್ಲಿ ಸುಧಾರಣೆಯಾಗಿದೆ. ನಗರ ಪ್ರದೇಶಗಳ ಮಹಿಳೆಯರ ಸರಾಸರಿ ಎತ್ತರದಲ್ಲಿ 0.20 ಸೆಂ.ಮೀ. ಹೆಚ್ಚಳವಾಗಿದ್ದರೆ, ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ 0.06 ಸೆಂ.ಮೀ. ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News