23 ರಾಜ್ಯಗಳಿಗೆ 7,274 ಕೋ.ರೂ. ವಿಪತ್ತು ಪ್ರತಿಕ್ರಿಯೆ ನಿಧಿ ಬಿಡುಗಡೆ ಮಾಡಿದ ಕೇಂದ್ರ ಸರಕಾರ

Update: 2021-10-01 17:43 GMT

ಹೊಸದಿಲ್ಲಿ, ಅ. 1: ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್ಡಿಆರ್ಎಫ್)ಯ ತನ್ನ ಪಾಲು 7,274.40 ಕೋಟಿ ರೂಪಾಯಿಯನ್ನು ಮುಂಗಡವಾಗಿ 23 ರಾಜ್ಯಗಳಿಗೆ ಬಿಡುಗಡೆ ಮಾಡಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.

ವಿಪತ್ತಿನಿಂದ ಸೃಷ್ಟಿಯಾಗುವ ಯಾವುದೇ ತುರ್ತನ್ನು ನಿಭಾಯಿಸಲು ತಮ್ಮ ಎಸ್ಡಿಆರ್ಎಫ್ನಲ್ಲಿ ರಾಜ್ಯ ಸರಕಾರಗಳು ಸಾಕಷ್ಟು ನಿಧಿ ಹೊಂದಲು ಕೇಂದ್ರ ಸರಕಾರದ ಉಪಕ್ರಮದ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

1,599.20 ಕೋಟಿ ರೂಪಾಯಿಯನ್ನು ಎರಡನೇ ಮುಂಗಡ ಕಂತಾಗಿ ಈಗಾಗಲೇ ಐದು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.

  ಎಸ್ಡಿಆರ್ಎಫ್ನ ಕೇಂದ್ರ ಸರಕಾರದ ಭಾಗವಾದ ಒಟ್ಟು 7,274.40 ಕೋಟಿ ರೂಪಾಯಿ ಎರಡನೇ ಕಂತನ್ನು ಮುಂಗಡವಾಗಿ 23 ರಾಜ್ಯಗಳಿಗೆ ಬಿಡುಗಡೆ ಮಾಡಲು ಅಮಿತ್ ಶಾ ಅವರು ಅನುಮೋದನೆ ನೀಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News