'ಮೋದಿ' ಸಿನಿಮಾ ನಿರ್ಮಾಪಕನಿಂದ ನಾಥೂರಾಮ್ ಗೋಡ್ಸೆ ಕುರಿತ ಸಿನಿಮಾ: ಗಾಂಧಿ ಜಯಂತಿಯಂದೇ ಘೋಷಣೆ

Update: 2021-10-03 09:32 GMT
Photo: Scroll.in

ಹೊಸದಿಲ್ಲಿ: ಮಹಾತ್ಮಾ ಗಾಂಧಿಯ 152ನೇ ಜನ್ಮದಿನಾಚರಣೆಯಂದು, ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಕುರಿತು ಸಿನಿಮಾ ನಿರ್ಮಾಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಕುರಿತ ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಸಂದೀಪ್ ಸಿಂಗ್ ಘೋಷಿಸಿದ್ದಾರೆ. ಮಹೇಶ್ ಮಂಜ್ರೇಕರ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಿನಿಮಾಗೆ ಸಂಬಂಧಿಸಿ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಗಾಂಧಿ ಜಯಂತಿಯಂದು, "ಬಾಪು, ಜನ್ಮದಿನದ ಶುಭಕಾಮನೆಗಳು, ನಿಮ್ಮ ಗೋಡ್ಸೆ. ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ. ಸಿನಿಮಾವನ್ನು ಸಂಜಯ್ ಸಿಂಗ್ ನ ಲೆಜೆಂಡ್ ಗ್ಲೋಬಲ್ ಸ್ಟೂಡಿಯೊ ಮುಖಾಂತರ ನಿರ್ಮಿಸಲಾಗಿದೆ. 2022ರ ಪ್ರಥಮಾರ್ಧದಲ್ಲಿ ನಿರ್ಮಾಣ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.

ಮಹಾತ್ಮಾ ಗಾಂಧಿಯ ಹಂತಕ ನಾಥೂರಾಮ ಗೋಡ್ಸೆ ಮೂಲಭೂತವಾದಿ ಸಂಘಟನೆ ಆರೆಸ್ಸೆಸ್ ನ ಮಾಜಿ ಕಾರ್ಯಕರ್ತನಾಗಿದ್ದು, ಹಿಂದೂ ಮಹಾಸಭಾದ ಸದಸ್ಯನಾಗಿದ್ದ. ಮಹಾತ್ಮ ಗಾಂಧಿಯನ್ನು ಗುಂಡು ಹಾರಿಸಿ ಕೊಂದಿದ್ದ ಈತನನ್ನ 1949ರ ನವೆಂಬರ್ 15ರಂದು ಗಲ್ಲಿಗೇರಿಸಲಾಗಿತ್ತು.  

"ನಾವು ಇಂತಹಾ ಸಿನಿಮಾಗಳನ್ನು ನಿರ್ಮಿಸುವಾಗ ಎಚ್ಚರಿಕೆ ವಹಿಸಬೇಕಾಗಿದೆ. ಜನರಿಗೆ ಗಾಂಧಿ ಹಂತಕ ಗೋಡ್ಸೆ ಎನ್ನುವುದು ಮಾತ್ರ ತಿಳಿದಿದೆ. ಆದರೆ ನಾವು ಗೋಡ್ಸೆಯ ಸಂಪೂರ್ಣ ಜೀವನ ಚರಿತ್ರೆ ತಿಳಿಸಲಿದ್ದೇವೆ. ನಾವು ಯಾರ ಸರಿತಪ್ಪುಗಳನ್ನೂ ಹೆಕ್ಕಿ ತೋರಿಸುವುದಿಲ್ಲ. ಇರುವ ಕಥೆಯನ್ನು ಹೇಳುತ್ತೇವೆ. ತಪ್ಪು ಸರಿ ಯಾರದು ಎನ್ನುವುದು ಪ್ರೇಕ್ಷಕರಿಗೆ ಬಿಡಲಾಗುವುದು" ಎಂದು ಪತ್ರಿಕಾಗೋಷ್ಠಿಯಲ್ಲಿ ಸಂದೀಪ್ ಸಿಂಗ್ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News