×
Ad

ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕಾಗಿ ಟಿಎಂಸಿಯಿಂದ 154.28 ಕೋ.ರೂ., ಡಿಎಂಕೆಯಿಂದ 114.14 ಕೋ.ರೂ.ವೆಚ್ಚ

Update: 2021-10-03 21:06 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ.3: ಕಳೆದ ಎಪ್ರಿಲ್-ಮೇ ತಿಂಗಳಿನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದ ಟಿಎಂಸಿ ರಾಜ್ಯದಲ್ಲಿ ಪ್ರಚಾರಕ್ಕಾಗಿ 154.28 ಕೋ.ರೂ.ಗಳನ್ನು ವ್ಯಯಿಸಿತ್ತು. ಇದೇ ವೇಳೆ ತನ್ನ ಬದ್ಧವೈರಿ ಎಐಎಡಿಎಂಕೆಯನ್ನು ಸೋಲಿಸಿ ತಮಿಳುನಾಡಿನ ಆಡಳಿತ ಚುಕ್ಕಾಣಿಯನ್ನು ತನ್ನ ಕೈಗೆ ತೆಗೆದುಕೊಂಡಿರುವ ಡಿಎಂಕೆ ರಾಜ್ಯದಲ್ಲಿ ಮತ್ತು ನೆರೆಯ ಪುದುಚೇರಿಯಲ್ಲಿ ಪ್ರಚಾರಕ್ಕಾಗಿ 114,14,08,525 ರೂ.ಗಳನ್ನು ವ್ಯಯಿಸಿತ್ತು.

ರಾಜಕೀಯ ಪಕ್ಷಗಳು ಸಲ್ಲಿಸಿರುವ ಚುನಾವಣಾ ವೆಚ್ಚ ಹೇಳಿಕೆಗಳನ್ನು ಚುನಾವಣಾ ಆಯೋಗವು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಎಐಎಡಿಎಂಕೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ 57,33,86,773 ರೂ.ಗಳನ್ನು ಮತ್ತು ಕಾಂಗ್ರೆಸ್ ಅಸ್ಸಾಂ,ಕೇರಳ,ಪುದುಚೇರಿ,ತಮಿಳುನಾಡು ಮತ್ತು ಪ.ಬಂಗಾಳಗಳಲ್ಲಿ ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕಾಗಿ 84,93,69,986 ರೂ.ಗಳನ್ನು ವೆಚ್ಚ ಮಾಡಿವೆ.

ಸಿಪಿಐ ನಾಲ್ಕು ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಚಾರಕ್ಕಾಗಿ 13,19,47,797 ರೂ.ಗಳ ಕನಿಷ್ಠ ವೆಚ್ಚವನ್ನು ಮಾಡಿದೆ. ಟಿಎಂಸಿ,ಕಾಂಗ್ರೆಸ್ ಮತ್ತು ಸಿಪಿಐ ರಾಷ್ಟ್ರಿಯ ಪಕ್ಷಗಳಾಗಿದ್ದರೆ,ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾದೇಶಿಕ ಪಕ್ಷಗಳಾಗಿವೆ.
ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿಯ ವೆಚ್ಚದ ವಿವರಗಳು ಇನ್ನೂ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News