ಹರ್ಯಾಣ ಸಿಎಂ ಕಟ್ಟರ್ ವಜಾಕ್ಕೆ ಆಗ್ರಹ
Update: 2021-10-04 23:45 IST
ರೈತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರನ್ನಲಾದ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರನ್ನು ವಜಾಗೊಳಿಸಬೇಕೆಂದು ಸಂಯುಕ್ತ ಕಿಶಾನ್ ಮೋರ್ಚಾ ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದೆ.
ಖಟ್ಟರ್ ಅವರು ರವಿವಾರ ಚಂಡೀಗಢದಲ್ಲಿ ಬಿಜೆಪಿಯ ಕಿಸಾನ್ ಮೋರ್ಚಾದ ಸಭೆಯಲ್ಲಿ ಮಾತನಾಡಿದ ಸಂದರ್ಭ, ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬುದ್ಧಿಕಲಿಸಲು ದೊಣ್ಣೆಗಳನ್ನು ಹಿಡಿಯಬೇಕೆಂದು ಕರೆ ನೀಡಿದ್ದರು. ಇದಕ್ಕಾಗಿ 500ರಿಂದ 1 ಸಾವಿರದಷ್ಟು ಮಂದಿಯ ಗುಂಪುಗಳನ್ನು ರಚಿಸುವಂತೆ ಮತ್ತು ಜೈಲಿಗೆ ಕೂಡಾ ಹೋಗಲು ಸಿದ್ಧರಿರಬೇಕೆಂದು ಹೇಳಿದ್ದರು.