ಹೊಸ ಪಕ್ಷದ ಹೆಸರು, ಚಿಹ್ನೆ ಪಡೆದ ಚಿರಾಗ್ ಪಾಸ್ವಾನ್, ಪಶುಪತಿ ಪರಾಸ್
Update: 2021-10-05 12:36 IST
ಹೊಸದಿಲ್ಲಿ: ಚಿರಾಗ್ ಪಾಸ್ವಾನ್ ಹಾಗೂ ಅವರ ಚಿಕ್ಕಪ್ಪ ಪಶುಪತಿ ಪರಾಸ್ ಅವರು ಬೇರೆಯಾದ ತಿಂಗಳ ನಂತರ ಹೊಸ ಪಕ್ಷದ ಹೆಸರುಗಳು ಹಾಗೂ ಚಿಹ್ನೆಗಳನ್ನು ಪಡೆದಿದ್ದಾರೆ.
ಲೋಕ ಜನಶಕ್ತಿ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು (ಒಂದು ಬಂಗಲೆ) ಸ್ತಂಭನಗೊಳಿಸಿದ ಕೆಲ ದಿನಗಳ ನಂತರ ಚುನಾವಣಾ ಆಯೋಗದ ಈ ಕ್ರಮ ಕೈಗೊಂಡಿದೆ.
ಅಕ್ಟೋಬರ್ 30 ರಂದು ಬಿಹಾರದಲ್ಲಿ ಕುಶೇಶ್ವರ ಆಸ್ಥಾನ್ ಹಾಗೂ ತಾರಾಪುರ ಕ್ಷೇತ್ರಗಳ ಉಪಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಎರಡು ಕಡೆಯ ಸ್ಪರ್ಧಾತ್ಮಕ ಹಕ್ಕುಗಳಿಗೆ ಪ್ರತಿಕ್ರಿಯಿಸಿತು.
ಚಿರಾಗ್ ಪಾಸ್ವಾನ್, (38 ವರ್ಷ) ಅವರು ವಿನಂತಿಸಿದ ಪಕ್ಷದ ಹೆಸರನ್ನು ಪಡೆದಿದ್ದಾರೆ. ಚಿರಾಗ್ ಅವರು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಹಾಗೂ 'ಹೆಲಿಕಾಪ್ಟರ್' ಚಿಹ್ನೆ ಪಡೆದರು.
ಪಶುಪತಿ ಪರಾಸ್ ಅವರಿಗೆ ಪಕ್ಷದ ಹೆಸರು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಮತ್ತು ಅವರ ಪಕ್ಷದ ಚಿಹ್ನೆ 'ಹೊಲಿಗೆ' ಯಂತ್ರ ಎಂದು ಚುನಾವಣಾ ಆಯೋಗ ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿದೆ.