ಲಖಿಂಪುರ ಹಿಂಸಾಚಾರದ ಮೊದಲು ರೈತರು ಸಚಿವರ ಕಾರಿನ ಮೇಲೆ ಕಲ್ಲುತೂರಾಟ ನಡೆಸಿಲ್ಲ: ಹೊಸ ವೀಡಿಯೊದಿಂದ ಬಹಿರಂಗ

Update: 2021-10-06 18:26 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರವಿವಾರ ಹಿಂಸಾತ್ಮಕ ಘರ್ಷಣೆಗೆ ಮೊದಲು  ಏನಾಯಿತು ಎಂಬುದನ್ನು ತೋರಿಸುವ ವೀಡಿಯೊವೊಂದು ವೈರಲ್ ಆಗಿದೆ. ತಮ್ಮ ಕುಟುಂಬಕ್ಕೆ ಸೇರಿದ್ದು ಎಂದು ಕೇಂದ್ರ ಸಚಿವರೇ ಹೇಳಿರುವ ಕಪ್ಪು  ಎಸ್ ಯುವಿವೊಂದು ಅತ್ಯಂತ ವೇಗವಾಗಿ ಬಂದು ರೈತರ ಮೇಲೆ ಹರಿದುಹೋಗಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಕೇಂದ್ರ ಸಚಿವರಿಗೆ ಸೇರಿರುವ  ಮಹೀಂದ್ರ ಥಾರ್ ಮೇಲೆ ರೈತರು ಕಲ್ಲು ಹಾಗೂ ಕೋಲಿನಿಂದ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ವೀಡಿಯೊದಲ್ಲಿ ರೈತರಿಂದ ಯಾವುದೇ ಕಲ್ಲುಗಳು ಅಥವಾ ಕೋಲುಗಳು ಕಾರಿನ ಮೇಲೆ ಎಸೆಯಲ್ಪಟ್ಟಿಲ್ಲ ಎಂದು ತೋರಿಸುತ್ತದ ಹಾಗೂ  ಚಾಲಕನ ನಿಯಂತ್ರಣ ತಪ್ಪಿ ಕನಿಷ್ಠ ನಾಲ್ವರು ರೈತರು ಸಾವನ್ನಪ್ಪಿದರು ಮತ್ತು  ಇನ್ನೂ ಅನೇಕರು ಗಾಯಗೊಂಡಿದ್ದಾರೆ.

ಚಾಲಕನು ಕಾರಿನ ಮೇಲೆ ಉತ್ತಮ ನಿಯಂತ್ರಣ ಹೊಂದಿದ್ದ. ಕಾರು ತನ್ನ ಮುಂದೆ ಸಾಗುತ್ತಿರುವ ರೈತರ ಗುಂಪಿನ  ಮೇಲೆ ಉದ್ದೇಶಪೂರ್ವಕವಾಗಿ ಹೆಚ್ಚಿನ ವೇಗದಲ್ಲಿ ಚಲಿಸಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿದೆ.

ಸಾಕ್ಷಿಗಳ ಪ್ರಕಾರ ಈ ಘಟನೆಯ ನಂತರವೇ ಆಕ್ರೋಶಗೊಂಡ ಗುಂಪೊಂದು ಕಾರುಗಳ ಮೇಲೆ ದಾಳಿ ಮಾಡಿತು ಹಾಗೂ ಬೆಂಗಾವಲು ವಾಹನದಲ್ಲಿದ್ದ ನಾಲ್ವರನ್ನು ಹೊಡೆದು ಸಾಯಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News