ಪ್ರಾಣಿಗಳ ರಕ್ಷಣೆ ಒಂದು ದಿನಕ್ಕೆ ಸೀಮಿತವಾಗದಿರಲಿ

Update: 2021-10-06 18:32 GMT

ಮಾನ್ಯರೇ,
ಜಗತ್ತಿನಾದ್ಯಂತ ‘ವಿಶ್ವ ಪ್ರಾಣಿ ಸಂರಕ್ಷಣಾ ದಿನ’(ಅಕ್ಟೋಬರ್ 4)ವನ್ನು ಆಚರಿಸಿ ಅಂದು ಪ್ರಾಣಿಗಳ ಹಕ್ಕು ಹಾಗೂ ಸಂರಕ್ಷಣೆಗೆ ಪ್ರಾಶಸ್ತ್ಯವನ್ನು ನೀಡಲಾಗುತ್ತ್ತಿದೆ. ಆದರೆ ನಮಗೆ ಪ್ರಾಣಿಗಳ ಸಂರಕ್ಷಣೆಯ ಕಾಳಜಿಯು ಕೇವಲ ಆ ಒಂದು ದಿನಕ್ಕೆ ಸೀಮಿತವಾಗಿರುವುದು ನಿಜಕ್ಕೂ ಖೇದಕರ ಸಂಗತಿ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳನ್ನು ಹಿಂಸಿಸಿ ಖುಷಿ ಪಡುವಂತಹ ಹಲವಾರು ವೀಡಿಯೊಗಳನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ. ಅಲ್ಲದೆ ಪ್ರಾಣಿಗಳು ಗುಂಪು ಗುಂಪಾಗಿ ಸತ್ತು ಬೀಳುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.

ಮನುಷ್ಯನ ಅತಿಯಾಸೆಯೇ ಪ್ರಾಣಿಗಳ ಸಾವಿಗೆ ಮುಖ್ಯ ಕಾರಣವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ವಿಷಪೂರಿತ ಆಹಾರ ಸೇವನೆಯಿಂದಾಗಿ 20 ಮಂಗಗಳು ಜೀವ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಮಾಧ್ಯಮಗಳಲ್ಲಿ ವರದಿಯಾಯಿತು. ಈ ಘಟನೆಯು ಮನುಷ್ಯನ ಕ್ರೂರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಮೂಕ ಪ್ರಾಣಿಗಳೊಂದಿಗೆ ಅಮಾನವೀಯವಾಗಿ ವರ್ತಿಸುವವರ ವಿರುದ್ಧ ಧ್ವನಿಯೆತ್ತಲು ಜನತೆ ಮುಂದಾಗಬೇಕು. ಮೂಕ ಪ್ರಾಣಿಗಳನ್ನು ಅನ್ಯಾಯವಾಗಿ ಕೊಲ್ಲುವ ಕ್ರೌರ್ಯವನ್ನು ನಾವೆಲ್ಲ ಒಟ್ಟಾಗಿ ವಿರೋಧಿಸಬೇಕು ಮತ್ತು ಜನರಲ್ಲಿ ಪ್ರಾಣಿಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ನಮ್ಮನ್ನಾಳುವ ಸರಕಾರಗಳು ಮಾಡಬೇಕಾಗಿದೆ. 

Writer - -ಆಯಿಶಾ ಹುದಾ, ಮಂಗಳೂರು

contributor

Editor - -ಆಯಿಶಾ ಹುದಾ, ಮಂಗಳೂರು

contributor

Similar News