ಆರ್ಯನ್ ಖಾನ್ ಗೆ ಹೃತಿಕ್ ರೋಷನ್ ಕಿವಿಮಾತು : ಚರ್ಚೆಗೆ ಗ್ರಾಸವಾದ ಇನ್ಸ್ಟಾ ಪೋಸ್ಟ್ ನಲ್ಲಿ ಹೇಳಿದ್ದೇನು ?

Update: 2021-10-07 18:25 GMT
ಫೈಲ್ ಚಿತ್ರ

ಮುಂಬೈ: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ರನ್ನು ಬೆಂಬಲಿಸಿ ನಟ ಸುನೀಲ್‌ ಶೆಟ್ಟಿ ಮಾತನಾಡಿದ ಬೆನ್ನಲ್ಲೇ ಬಾಲಿವುಡ್‌ ನ ಖ್ಯಾತ ನಟ ಹೃತಿಕ್‌ ರೋಶನ್‌ ಸಾಮಾಜಿಕ ತಾಣ ಖಾತೆಯಲ್ಲಿ ಭಾವನಾತ್ಮಕ ಪತ್ರವೊಂದನ್ನು ಪ್ರಕಟಿಸಿದ್ದಾರೆ. ಈ ಬರಹಕ್ಕೆ ಪರ ವಿರೋಧಗಳೆರಡೂ ಸೃಷ್ಟಿಯಾಗಿದೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡ ಹೃತಿಕ್‌ ರೋಷನ್‌, "ನೀನು ಸಣ್ಣ ಮಗುವಾಗಿದ್ದಾಗಲೂ ನನಗೆ ಗೊತ್ತು, ಒಬ್ಬ ಯುವಕನಾದಾಗಲೂ ನನಗೆ ಗೊತ್ತು. ನೀನು ಅನುಭವಿಸುತ್ತಿರುವುದನ್ನೆಲ್ಲಾ ಸ್ವೀಕರಿಸು. ಇವುಗಳೆಲ್ಲವೂ ನಿನಗೊಂದು ಉಡುಗೊರೆ ಮಾತ್ರ. ಯಾವತ್ತು ನೀನು ಜೀವನದ ಚುಕ್ಕಿಗಳನ್ನು ಜೋಡಿಸುತ್ತೀಯೋ, ಅಂದು ಇದೆಲ್ಲವೂ ಕೆಲಸಕ್ಕೆ ಬರಲಿದೆ" ಎಂದು ಅವರು ಬರೆದಿದ್ದಾರೆ.

"ಕೋಪ, ಗೊಂದಲ, ಅಸಹಾಯಕತೆ ಇವೆಲ್ಲವನ್ನೂ ನೀನು ಅನುಭವಿಸುತ್ತಿರಬಹುದು. ಹಾ.. ಇದೆಲ್ಲವೂ ನಿನ್ನೊಳಗಿನ ಹೀರೋವನ್ನು ಹೊರಗೆಡಹಲಿರುವ ಕೆಲ ವಸ್ತುಗಳು ಮಾತ್ರ. ನೀನು ಕತ್ತಲೆಯನ್ನು ಅನುಭವಿಸಬೇಕು. ಶಾಂತವಾಗಿರು... ನಿನ್ನದೆಲ್ಲವನ್ನೂ ನಿನ್ನದಾಗಿಯೇ ಸ್ವೀಕರಿಸಿಕೋ, ಬೆಳಕಿನ ಮೇಲೆ ವಿಶ್ವಾಸವಿಡು. ಅದು ಯಾವತ್ತೂ ಇದ್ದೇ ಇರುತ್ತದೆ. ಈ ಕ್ಷಣಗಳೆಲ್ಲವೂ ನಿನ್ನ ನಾಳೆಗಳನ್ನು ಸೃಷ್ಟಿಸಲಿವೆ. ನಾಳೆಗಳು ಖಂಡಿತವಾಗಿಯೂ ಪ್ರಕಾಶಮಾನವಾಗಿರುತ್ತದೆ. ಲವ್ಯೂ ಮ್ಯಾನ್‌ ಎಂದು ಹೃತಿಕ್‌ ಬರೆದುಕೊಂಡಿದ್ದಾರೆ.

ಹಲವರು ಈ ಪೋಸ್ಟ್‌ ಗೆ ವಿರೋಧ ವ್ಯಕ್ತಪಡಿಸಿ, ನಿಮ್ಮ ಮೇಲಿನ ಅಭಿಮಾನ ಕಡಿಮೆಯಾಯಿತು ಎಂದರೆ, ಇನ್ನು ಕೆಲವರು ಸತ್ಯವಾದ ಮಾತುಗಳನ್ನೇ ನುಡಿದಿದ್ದೀರಿ ಎಂದು ಪರವಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News