×
Ad

ರೈತರನ್ನು ಖಲಿಸ್ತಾನಿಗಳೆಂದ ಕೇಂದ್ರ ಸಚಿವರ ವಿರುದ್ಧ ವರುಣ್ ಗಾಂಧಿ ಕಿಡಿ

Update: 2021-10-10 15:07 IST

ಹೊಸದಿಲ್ಲಿ: ಈ ವಾರದ ಆರಂಭದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲ್ಪಟ್ಟಿರುವ  ಬಿಜೆಪಿ ಸಂಸದ ವರುಣ್ ಗಾಂಧಿ  ಇಂದು ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಾರೆ.  ಖಲಿಸ್ತಾನಿಗಳು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಈ  ಘಟನೆಯನ್ನು ರೂಪಿಸಿದ್ದರು ಎಂಬ ಅಜಯ್ ಮಿಶ್ರಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಈ ಘಟನೆಗೆ  ಕೋಮು ಬಣ್ಣ ನೀಡುವ ಪ್ರಯತ್ನ ಇದಾಗಿದೆ ಎಂದು ಸಚಿವರ ಹೆಸರನ್ನು ಎತ್ತದೆ ವರುಣ್ ಗಾಂಧಿ ಹೇಳಿದರು.  ಈ ಘಟನೆಯು  'ಕೊಲೆ' ಆಗಿದ್ದು, ಇದಕ್ಕೆ ಹೊಣೆಗಾರಿಕೆಯನ್ನು ಹೊರಬೇಕೆಂದು ವರುಣ್ ಗಾಂಧಿ ಈ ಹಿಂದೆ ಆಗ್ರಹಿಸಿದ್ದರು.

ಭಾರೀ ರಾಜಕೀಯ ಕೋಲಾಹಲದ ನಡುವೆ ಕಳೆದ ರವಿವಾರ ನಡೆದ ಹಿಂಸಾ ಘಟನೆಗೆ ಸಂಬಂಧಿಸಿ ಕೇಂದ್ರ ಸಚಿವ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ನನ್ನು ನಾಲ್ವರನ್ನು ರೈತರನ್ನು ಕೊಂದ ಆರೋಪದ ಮೇಲೆ ಶನಿವಾರ ಬಂಧಿಸಲಾಯಿತು. ಆಶೀಶ್ ವಿರುದ್ದ ಕೊಲೆ ಆರೋಪವಿದೆ.

"ಲಖಿಂಪುರ ಖೇರಿಯನ್ನು ಹಿಂದೂ ವಿರುದ್ಧ ಸಿಖ್ ಕದನವನ್ನಾಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದು ಅನೈತಿಕ ಹಾಗೂ  ಸುಳ್ಳು ನಿರೂಪಣೆ ಮಾತ್ರವಲ್ಲ, ಈ ತಪ್ಪು ರೇಖೆಗಳನ್ನು ಸೃಷ್ಟಿಸುವುದು ಹಾಗೂ ಗುಣಮುಖವಾಗಲು ಒಂದು ಪೀಳಿಗೆ ತೆಗೆದುಕೊಳ್ಳುವ ಗಾಯವನ್ನು ಪುನಃ ಕೆದಕುವುದು ಅಪಾಯಕಾರಿ. ರಾಷ್ಟ್ರೀಯ ಏಕತೆಯನ್ನು ಮೀರಿ ಸಣ್ಣ ರಾಜಕೀಯ ಲಾಭಗಳನ್ನು ಇರಿಸಿ ಹೀಗೆ ಮಾಡಬಾರದು "ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

"ನಿರಂತರವಾಗಿ ಪ್ರತಿಭಟಿಸುವ ರೈತರನ್ನು ವಿವರಿಸಲು ಖಲಿಸ್ತಾನಿ ಎಂಬ ಪದವನ್ನು ಬಳುಸುವುದು ನಮ್ಮ ಗಡಿಗಳಲ್ಲಿ ಹೋರಾಡಿ ರಕ್ತ ಚೆಲ್ಲಿದ ಈ ಹೆಮ್ಮೆಯ ಪುತ್ರರ ತಲೆಮಾರುಗಳಿಗೆ ಮಾಡಿದ ಅವಮಾನ ಮಾತ್ರವಲ್ಲ, ಇದು ತಪ್ಪು ರೀತಿಯ ಕ್ರಿಯೆಯನ್ನು ಪ್ರಚೋದಿಸಿದರೆ ನಮ್ಮ ರಾಷ್ಟ್ರೀಯ ಏಕತೆಗೆ ಅತ್ಯಂತ ಅಪಾಯಕಾರಿ’’  ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News