ಭಾರತ-ಚೀನಾ ಸೇನಾ ಕಮಾಂಡರ್ ಗಳ ಮಾತುಕತೆ ವಿಫಲ

Update: 2021-10-11 05:36 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಲಡಾಖ್‌ನಲ್ಲಿನ ಬಿಕ್ಕಟ್ಟಿನ ಕುರಿತು ಭಾರತ ಹಾಗೂ  ಚೀನಾದ ಸೇನಾ ಕಮಾಂಡರ್‌ಗಳ ನಡುವಿನ 13ನೇ ಸುತ್ತಿನ  ಮಾತುಕತೆಗಳು ರವಿವಾರ ಮುರಿದು ಬಿದ್ದಿದೆ ಎಂದು ಭಾರತೀಯ ಸೇನೆ ತಿಳಿಸಿರುವುದಾಗಿ NDTV ವರದಿ ಮಾಡಿದೆ.

ಮಾತುಕತೆಯಲ್ಲಿ ಚೀನಾದ ಕಡೆಯವರ "ಸಹಮತ" ಇರಲಿಲ್ಲ ಹಾಗೂ  "ಯಾವುದೇ ಆಶಾದಾಯಕ ಪ್ರಸ್ತಾಪಗಳನ್ನು ನೀಡಲು ಸಾಧ್ಯವಾಗಲಿಲ್ಲ" ಎಂದು ಭಾರತೀಯ ಸೇನೆಯು ಹೇಳಿದೆ.

"ಸಭೆಯಲ್ಲಿ, ಭಾರತದ ಕಡೆಯಿಂದ  ಉಳಿದ ಪ್ರದೇಶಗಳ ಕುರಿತಾದ ವಿವಾದ ಪರಿಹರಿಸಲು ರಚನಾತ್ಮಕ ಸಲಹೆಗಳನ್ನು ನೀಡಲಾಯಿತು. ಆದರೆ ಚೀನಾದ ಕಡೆಯವರು ಇದಕ್ಕೆ ಒಪ್ಪಿಕೊಳ್ಳಲಿಲ್ಲ ಹಾಗೂ  ಯಾವುದೇ ಆಶಾದಾಯಕ ಪ್ರಸ್ತಾಪಗಳನ್ನು ನೀಡಲು ಸಾಧ್ಯವಾಗಲಿಲ್ಲ. ಈ ಸಭೆಯಲ್ಲಿ ಉಳಿದ ಪ್ರದೇಶಗಳ ಕುರಿತು ನಿರ್ಣಯಕ್ಕೆ ಬರಲಿಲ್ಲ "ಎಂದು ಸೇನೆಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

"ಎರಡೂ ಕಡೆಯವರು ಸಂವಹನವನ್ನು ಕಾಯ್ದುಕೊಳ್ಳಲು ಮತ್ತು ನೆಲದ ಮೇಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಚೀನಾದ ಕಡೆಯವರು ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ ಮತ್ತು ಉಳಿದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಮೂಲಕ ಕೆಲಸ ಮಾಡುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿದೆ’’ಎಂದು ಭಾರತದ ಸೇನೆ ಆಶಾವಾದ ವ್ಯಕ್ತಪಡಿಸಿದೆ.

ಮಾತುಕತೆಗಳು ವಿಫಲವಾಗಿವೆ ಎಂದು ಚೀನಾ ಕೂಡ ಹೇಳಿದೆ. "ಭಾರತವು ಸಮಂಜಸವಲ್ಲದ ಮತ್ತು ಅವಾಸ್ತವಿಕ ಬೇಡಿಕೆಗಳನ್ನು ಒತ್ತಾಯಿಸುತ್ತದೆ. ಮಾತುಕತೆಗೆ ತೊಂದರೆಗಳನ್ನು ನೀಡುತ್ತದೆ" ಎಂದು ಚೀನಾದ ಸೇನೆಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News