ಕರ್ನಾಟಕ,ಕೇರಳದಲ್ಲಿ ಶತಕದ ಗಡಿ ದಾಟಿದ ಡೀಸೆಲ್ ಬೆಲೆ
ಹೊಸದಿಲ್ಲಿ.11: ಸತತ ಏಳನೇ ದಿನವಾದ ಸೋಮವಾರವೂ ದೇಶಾದ್ಯಂತ ಇಂಧನ ದರಗಳನ್ನು ಹೆಚ್ಚಿಸಲಾಗಿದ್ದು,ಪ್ರತಿ ಲೀ.ಪೆಟ್ರೋಲ್ಗೆ 30 ಪೈಸೆ ಮತ್ತು ಡೀಸೆಲ್ಗೆ 35 ಪೈಸೆ ಏರಿಕೆಯಾಗಿದೆ. ಕರ್ನಾಟಕ ಮತ್ತು ಕೇರಳಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ಬೆಲೆ ನೂರರ ಗಡಿಯನ್ನು ದಾಟಿದೆ.
ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ ದರ 104.44 ರೂ.ಗೆ ಏರಿಕೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಅತ್ತ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 110.41 ರೂ.ಗೆ ಏರಿಕೆಯಾಗಿದೆ.
ದಿಲ್ಲಿ ಮತ್ತು ಮುಂಬೈಗಳಲ್ಲಿ ಡೀಸೆಲ್ ಬೆಲೆಗಳು ಪ್ರತಿ ಲೀ.ಗೆ ಅನುಕ್ರಮವಾಗಿ 101.03 ರೂ. ಮತ್ತು 93.17 ರೂ.ಆಗಿವೆ. ದೇಶದ ಹೆಚ್ಚಿನ ಭಾಗಗಳಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ 100 ರೂ.ಗಿಂತ ಅಧಿಕವಿದ್ದು,ಹಲವಾರು ರಾಜ್ಯಗಳಲ್ಲಿ ಡೀಸೆಲ್ ಬೆಲೆ ನೂರರ ಗಡಿ ದಾಟಿದೆ. ಈ ಪಟ್ಟಿಗೆ ಕರ್ನಾಟಕ ಮತ್ತು ಕೇರಳ ಹೊಸ ಸೇರ್ಪಡೆಗಳಾಗಿವೆ.
ತಿರುವನಂತಪುರದಲ್ಲಿ ಈಗ ಪ್ರತಿ ಲೀ.ಡೀಸೆಲ್ ಬೆಲೆ 100.15 ರೂ.ಆಗಿದೆ.
ಒಡಿಶಾ,ಆಂಧ್ರಪ್ರದೇಶ,ತೆಲಂಗಾಣ,ಗುಜರಾತ,ಮಹಾರಾಷ್ಟ್ರ,ಛತ್ತೀಸ್ ಗಢ, ಮಧ್ಯಪ್ರದೇಶ,ರಾಜಸ್ಥಾನ,ಬಿಹಾರ ಮತ್ತು ಲೇಹ್ಗಳಲ್ಲಿಯೂ ಡೀಸೆಲ್ ಬೆಲೆ ಶತಕವನ್ನು ಬಾರಿಸಿದೆ.
ಸೋಮವಾರ ಸೇರಿದಂತೆ ಸತತ ಈ ಏಳು ದಿನಗಳಲ್ಲಿ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ 30 ಮತ್ತು 35 ಪೈಸೆ ಏರಿಕೆಯನ್ನು ಮಾಡಲಾಗಿದ್ದರೆ, ಇದಕ್ಕೂ ಮೊದಲು ಇವುಗಳನ್ನು ಅನುಕ್ರಮವಾಗಿ 25 ಪೈಸೆ ಮತ್ತು 30 ಪೈಸೆಗಳಷ್ಟು ಹೆಚ್ಚಿಸಲಾಗಿತ್ತು.