ಇಡೀ ದೇಶದಲ್ಲಿ ವಿದ್ಯುತ್ ಪರಿಸ್ಥಿತಿ 'ಅತ್ಯಂತ ಗಂಭೀರ' ಎಂದ ಅರವಿಂದ ಕೇಜ್ರಿವಾಲ್

Update: 2021-10-11 17:05 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿನ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯು ಸುಧಾರಿಸದಿದ್ದಲ್ಲಿ ವಿದ್ಯುತ್ ನಿಲುಗಡೆ ಕುರಿತು ದಿಲ್ಲಿ ಸಚಿವರು ಎರಡು ದಿನಗಳ ನಂತರ ಎಚ್ಚರಿಸಿದ್ದರು. ಇದೀಗ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಡೀ ದೇಶದಲ್ಲಿ ವಿದ್ಯುತ್ ಪರಿಸ್ಥಿತಿ "ಅತ್ಯಂತ ಗಂಭೀರವಾಗಿದೆ" ಎಂದು ಹೇಳಿದ್ದಾರೆ.

"ಇಡೀ ದೇಶದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಇದರ ಬಗ್ಗೆ ಹಲವಾರು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಎಲ್ಲರೂ ಒಟ್ಟಾಗಿ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಕೇಜ್ರಿವಾಲ್ ಇಂದು ಮಾಧ್ಯಮಗಳಿಗೆ ತಿಳಿಸಿದರು.

ಗುಜರಾತ್, ಪಂಜಾಬ್, ರಾಜಸ್ಥಾನ, ದಿಲ್ಲಿ, ಒಡಿಶಾ ಹಾಗೂ ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳು ವಿದ್ಯುತ್ ಕೈಕೊಡುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಿವೆ.

ವಿದ್ಯುತ್ ಬಿಕ್ಕಟ್ಟನ್ನು ಪರಿಹರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಯಾವುದೇ "ತುರ್ತು ಪರಿಸ್ಥಿತಿ" ಉದ್ಭವಿಸುವುದನ್ನು ನಮ್ಮ ಸರಕಾರ ಬಯಸುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News