ಲಖಿಂಪುರ ಹಿಂಸಾಚಾರ: ಮಹಾರಾಷ್ಟ್ರ ಬಂದ್ ಹೆಚ್ಚುಕಡಿಮೆ ಶಾಂತಿಯುತ

Update: 2021-10-11 17:12 GMT

ಮುಂಬೈ,ಅ.11: ಲಖಿಂಪುರ ಹಿಂಸಾಚಾರವನ್ನು ವಿರೋಧಿಸಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿ (ಎಂವಿಎ)ಯು ಸೋಮವಾರ ಕರೆ ನೀಡಿದ್ದ ಮಹಾರಾಷ್ಟ್ರ ಬಂದ್ನ್ನು ಸಮಾಜದ ಎಲ್ಲ ವರ್ಗಗಳು ಬೆಂಬಲಿಸಿದ್ದವು. ಜಳಗಾಂವ ಜಿಲ್ಲೆಯಲ್ಲಿ ಎಂವಿಎ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಯನ್ನು ಹೊರತುಪಡಿಸಿ ಬಂದ್ ಹೆಚ್ಚುಕಡಿಮೆ ಶಾಂತಿಯುತವಾಗಿತ್ತು.
ಬಂದ್ ಕರೆಗೆ ಅದ್ಭುತ ಪ್ರತಿಕ್ರಿಯೆ ದೊರಕಿದೆ ಎಂದು ಎಂವಿಎ ಹೇಳಿಕೊಂಡಿದ್ದರೆ,ಕೆಲವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ವ್ಯವಹಾರಗಳು ಎಂದಿನಂತೆ ನಡೆದಿದ್ದವು.

 ಸೋಮವಾರ ನಸುಕಿನಲ್ಲಿ ಮುಂಬೈನಲ್ಲಿ ಅಪರಿಚಿತ ವ್ಯಕ್ತಿಗಳು ಕಲ್ಲುತೂರಾಟ ನಡೆಸಿದ್ದರಿಂದ ಎಂಟು ಬಿಇಎಸ್ಟಿ ಬಸ್ ಗಳಿಗೆ ಹಾನಿಯಾಗಿದೆ.
 ರಾಜ್ಯಾದ್ಯಂತ ಟಯರ್ಗಳನ್ನು ಸುಟ್ಟ ಘಟನೆಗಳು ವರದಿಯಾಗಿದ್ದು,ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿಯ ಬಿಜೆಪಿ ಸರಕಾರಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು. ಕೊಲ್ಲಾಪುರದಲ್ಲಿ ಬೆಳಿಗ್ಗೆ ಸುಮಾರು ಅರ್ಧ ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆಯನ್ನುಂಟು ಮಾಡಿದ್ದಕ್ಕಾಗಿ ಕೆಲವು ಶಿವಸೈನಿಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಥಾಣೆಯಲ್ಲಿ ಶಿವಸೈನಿಕರು ಓರ್ವ ರಿಕ್ಷಾ ಚಾಲಕನನ್ನು ಥಳಿಸಿದ್ದಾರೆ.

ನಿರಂತರ ಕೋವಿಡ್ ಲಾಕ್ಡೌನ್ಗಳ ಬಳಿಕ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ವ್ಯಾಪಾರಿಗಳು,ಉದ್ಯಮಿಗಳು ಮತ್ತು ರೈತರ ಮೇಲೆ ಬಂದ್ ಹೇರಿದ ಎಂವಿಎಯ ‘ಇಬ್ಬಗೆ ನಿಲುವನ್ನು ’ ಬಿಜೆಪಿ ಮತ್ತು ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಪ್ರಶ್ನಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News