×
Ad

ಬಿಜೆಪಿ ಸರಕಾರ ರೈತ ವಿರೋಧಿ: ಉತ್ತರ ಪ್ರದೇಶ ಸರಕಾರಕ್ಕೆ ಅಖಿಲೇಶ್ ಯಾದವ್ ತರಾಟೆ

Update: 2021-10-14 21:22 IST

ಲಕ್ನೊ: ಲಖಿಂಪುರ ಹಿಂಸಾಚಾರ  ಘಟನೆಯ ಕುರಿತು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ  ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಅಖಿಲೇಶ್ ಯಾದವ್ 'ಬಿಜೆಪಿ ಸರಕಾರ ರೈತ ವಿರೋಧಿ' ಎಂದು ಆರೋಪಿಸಿದರು ಹಾಗೂ  ರಾಜ್ಯದಲ್ಲಿ ಶೀಘ್ರದಲ್ಲೇ ಆಡಳಿತ ಬದಲಾವಣೆಯಾಗಲಿದೆ ಎಂದು ಪ್ರತಿಪಾದಿಸಿದರು. .

"ಬಿಜೆಪಿ ಕಾರ್ಯಕರ್ತರು ರೈತರನ್ನು ತಮ್ಮ ವಾಹನಗಳಡಿ  ತುಳಿದು ಕೊಂದರು. ಈ ಸರಕಾರ ರೈತ ವಿರೋಧಿ, ರಸಗೊಬ್ಬರ ಕಳವು ಹಾಗೂ  ಕೀಟನಾಶಕಗಳ ಬೆಲೆ ಏರಿಕೆಯ ಹಿಂದೆ ಸರಕಾರವಿದೆ. ನಕಲಿ ಬಾಬಾ ನನ್ನು ಶೀಘ್ರವೇ ತೆಗೆದುಹಾಕಲಾಗುವುದು" ಎಂದು 2022 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ  ರಥ ಯಾತ್ರೆಯಲ್ಲಿ ಮಾತನಾಡುತ್ತಾ ಯಾದವ್  ಆರೋಪಿಸಿದರು.  

ಈ ಸರಕಾರ ಸಾರ್ವಜನಿಕರಿಗೆ ಮೋಸ ಮಾಡಿದೆ. ಈ ಸರಕಾರದ ಅಡಿಯಲ್ಲಿ, ಹಣದುಬ್ಬರ ಹೆಚ್ಚಾಗಿದೆ, ನಿರುದ್ಯೋಗ ಹೆಚ್ಚಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ, ಅಪರಾಧ ಹೆಚ್ಚಾಗಿದೆ, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News