ರೈತರ ಪ್ರತಿಭಟನಾ ಸ್ಥಳದಲ್ಲಿ ಭೀಕರ ಹತ್ಯೆ: ನಿಹಾಂಗ್ ಸದಸ್ಯ ಶರಣಾಗತಿ

Update: 2021-10-15 16:59 GMT

ಹೊಸದಿಲ್ಲಿ: ಹರ್ಯಾಣ-ದಿಲ್ಲಿ ಗಡಿಯಲ್ಲಿರುವ ಸಿಂಘು ಎಂಬಲ್ಲಿ ರೈತರ ಪ್ರತಿಭಟನಾ ಸ್ಥಳದಲ್ಲಿ ನಡೆದಿರುವ ಭೀಕರ ಹತ್ಯೆಗೆ ಸಂಬಂಧಿಸಿ  'ನಿಹಾಂಗ್' ನ ಸದಸ್ಯ ಶುಕ್ರವಾರ ಶರಣಾಗಿದ್ದಾನೆ. ಇಂದು ಬೆಳಿಗ್ಗೆ ಬಲ ಕಾಲು ಹಾಗೂ  ಎಡಗೈಯನ್ನು ಕತ್ತರಿಸಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು .

ನಿಹಾಂಗ್ ಸರವ್ ಜಿತ್ ಸಿಂಗ್ ಶುಕ್ರವಾರ ಸಂಜೆ ಪೊಲೀಸರಿಗೆ ಶರಣಾಗಿದ್ದು, ಆತ  ಹತ್ಯೆಯ ಹೊಣೆ ಹೊತ್ತಿದ್ದಾನೆ. ಆತನನ್ನು ಬಂಧಿಸಲಾಗಿದೆ. ಆತನನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು NDTV ವರದಿ ಮಾಡಿದೆ.

ಇದಕ್ಕೂ ಮೊದಲು  ಸೋನಿಪತ್‌ಗೆ ಭೇಟಿ ನೀಡಬೇಕಿದ್ದ ಹರ್ಯಾಣ ಮುಖ್ಯಮಂತ್ರಿ ಎಂ.ಎಲ್. ಖಟ್ಟರ್,ಹತ್ಯೆ ಕುರಿತು  ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಖಟ್ಟರ್ ಅವರು ಚಂಡೀಗಡದ ಅವರ ನಿವಾಸದಲ್ಲಿ ಸಭೆ ನಡೆಸಿದರು. ಹತ್ಯೆಯ ಕುರಿತು ಚರ್ಚಿಸಲು ಗೃಹ ಸಚಿವ ಅನಿಲ್ ವಿಜ್ ಮತ್ತು ಹರಿಯಾಣ ಪೊಲೀಸ್ ಡಿಜಿಪಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News