ಕೇರಳದಾದ್ಯಂತ ಭಾರೀ ಮಳೆ: ಪ್ರಮುಖ ಅಣೆಕಟ್ಟುಗಳು ಭರ್ತಿ

Update: 2021-10-16 14:30 GMT
Express Photo:

ತಿರುವನಂತಪುರಂ: ಅರಬ್ಬಿ ಸಮುದ್ರ ಹಾಗೂ  ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣದಿಂದಾಗಿ ಕೇರಳದಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. 2018 ರ ಪ್ರವಾಹದ ಸಮಯದಲ್ಲಿ ಉಂಟಾದಂತೆಯೇ ಪತ್ತನಂತಿಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ಪ್ರಮುಖ ಅಣೆಕಟ್ಟುಗಳನ್ನು ಅವುಗಳ ಸಾಮರ್ಥ್ಯದಷ್ಟು  ತುಂಬಿವೆ.

ತಿರುವನಂತಪುರ ಹಾಗೂ  ಪತ್ತನಂತಿಟ್ಟದ ಜಿಲ್ಲಾಡಳಿತಗಳು ವಿವಿಧ ಅಣೆಕಟ್ಟುಗಳ ಶಟರ್‌ಗಳನ್ನು ಹೆಚ್ಚಿಸುವ ಎಚ್ಚರಿಕೆ ನೀಡಿವೆ. ಎರಡೂ ಜಿಲ್ಲೆಗಳಲ್ಲಿ ಶನಿವಾರ ಮುಂಜಾನೆ ಭಾರೀ ಮಿಂಚು ಕಂಡುಬಂದಿದೆ.

ತಿರುವನಂತಪುರಂನಲ್ಲಿ ತುರ್ತು ಉದ್ದೇಶಗಳಿಗಾಗಿ ಜನರು ತಮ್ಮ ಪ್ರಯಾಣವನ್ನು ಸೀಮಿತಗೊಳಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಲಮೂಲಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ನೆಯ್ಯಾರ್ ಅಣೆಕಟ್ಟಿನ ನಾಲ್ಕು ಶಟರ್‌ಗಳನ್ನು 240 ಸೆಂ.ಮೀ. ಹೆಚ್ಚಿಸಲಾಗಿದೆ. ತಿರುವನಂತಪುರಂನ ಹಲವು ಭಾಗಗಳಲ್ಲಿ ನೀರು ತುಂಬಿದ ವರದಿಯಾಗಿದೆ.

ಪತ್ತನಂತಿಟ್ಟದಲ್ಲಿ ಅನಾಥೋಡ್ ಅಣೆಕಟ್ಟು ಮತ್ತು ಅದರ ಜಲಾನಯನ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಣೆಕಟ್ಟು ಶಟರ್ ಗಳನ್ನು ಶೀಘ್ರವೇ ಹೆಚ್ಚಿಸಲಾಗುವುದು. ಜಿಲ್ಲೆಯ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ, ಇಡುಕ್ಕಿ, ಎರ್ನಾಕುಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಧಾರಣ ಮಳೆ ಮತ್ತು ಬಿರುಗಾಳಿಯ ವೇಗ ಗಂಟೆಗೆ 40 ಕಿ.ಮೀ. ತಲುಪುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News