ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ

Update: 2021-10-17 18:19 GMT

ಹೊಸದಿಲ್ಲಿ,ಅ.17: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಪ್ರಚಾರದ ನೇತೃತ್ವವನ್ನು ವಹಿಸಲಿದ್ದಾರೆ.

ನೂತನವಾಗಿ ರಚನೆಯಾಗಿರುವ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥ ಪಿ.ಎಲ್.ಪುನಿಯಾ ಅವರು,ಪ್ರಿಯಾಂಕಾ ಪ್ರಸ್ತುತ ಉ.ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿರುವುದರಿಂದ ಅವರಿಗೆ ಪ್ರಚಾರದ ನೇತೃತ್ವವನ್ನು ವಹಿಸಲು ನಿರ್ಧರಿಸಲಾಗಿದೆ ಎಂದು ರವಿವಾರ ಸುದ್ದಿಗಾರರಿಗೆ ತಿಳಿಸಿದರು.

ಎಸ್ಪಿ ಮತ್ತು ಬಿಎಸ್ಪಿ ತುಂಬ ಹಿಂದೆ ಬಿದ್ದಿವೆ ಮತ್ತು ಅವು ಹೋರಾಟದಲ್ಲಿ ಇಲ್ಲ,ಹೀಗಾಗಿ ಉ.ಪ್ರ.ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ ಎಂದು ಅವರು ಹೇಳಿದರು.

ಪ್ರಿಯಾಂಕಾ ಎಲ್ಲ ವಿಷಯಗಳಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದಾರೆ ಮತ್ತು ಲಖಿಂಪುರ ಖೇರಿ ಘಟನೆ ಸಂಭವಿಸಿದಾಗ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲು ತಕ್ಷಣವೇ ಹೊರಟಿದ್ದರು. ಸೀತಾಪುರದಲ್ಲಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ನ್ಯಾಯಕ್ಕಾಗಿ ಹೋರಾಡುವ ಅವರ ನಿರ್ಧಾರ ಅಚಲವಾಗಿತ್ತು. ತನ್ನ ಹೋರಾಟದಲ್ಲಿ ಯಶಸ್ವಿಯಾದ ಅವರು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲು ಲಖಿಂಪುರ ಖೇರಿ ಮತ್ತು ಬಹರೈಚ್ಗೆ ತೆರಳಿದ್ದರು ಎಂದು ಪುನಿಯಾ ಹೇಳಿದರು.
ಲಖಿಂಪುರ ಘಟನೆ ಮತ್ತು ರೈತರ ಸಮಸ್ಯೆಗಳು ಚುನಾವಣೆಗಳಲ್ಲಿ ಪ್ರಮುಖ ವಿಷಯಗಳಾಗಲಿವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News