×
Ad

ಬಂಗಾಳದಲ್ಲಿ ಬಿಜೆಪಿ ಯುವ ಘಟಕದ ನಾಯಕನ ಹತ್ಯೆ:ಟಿಎಂಸಿ ಕೈವಾಡ ಎಂದ ಸುವೇಂದು ಅಧಿಕಾರಿ

Update: 2021-10-18 12:11 IST

ಕೋಲ್ಕತಾ: ಉತ್ತರ ದಿನಾಜ್‌ಪುರದ ಇತಹಾರ್‌ನಲ್ಲಿ ಪಕ್ಷದ ಯುವ ಘಟಕದ ನಾಯಕ ಮಿಥುನ್ ಘೋಷ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದಿ ಅಧಿಕಾರಿ ಹೇಳಿದ್ದಾರೆ.

ಸೋಮವಾರ ಈ ಕುರಿತು  ಟ್ವೀಟ್ ಮಾಡಿರುವ  ಸುವೇಂದು ಅಧಿಕಾರಿ, “ಉತ್ತರ ದಿನಾಜ್‌ಪುರ ಜಿಲ್ಲೆಯ ಬಿಜೆಪಿಯ  ಯುವ ಮೋರ್ಚಾದ ಉಪಾಧ್ಯಕ್ಷ ಮಿಥುನ್ ಘೋಷ್ ಅವರನ್ನು ಇಟಹಾರ್ ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇದರಲ್ಲಿ ಟಿಎಂಸಿಯ ಕೈವಾಡವಿದೆ. ನಾವು ಮಿಥುನ್ ಘೋಷ್ ಅವರನ್ನು ಮರೆಯುವುದಿಲ್ಲಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News