ಭದ್ರತಾ ಏಜೆನ್ಸಿಗಳು,ಅರೆಸೇನಾ ಪಡೆಯ ಅಧಿಕಾರಿಯೊಂದಿಗೆ ಅಮಿತ್ ಶಾ ಸಭೆ,ಕಾಶ್ಮೀರ ವಿಚಾರ ಚರ್ಚೆ:ವರದಿ

Update: 2021-10-18 13:36 GMT

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪ್ರಮುಖ ಭದ್ರತಾ ಏಜೆನ್ಸಿಗಳು,ಅರೆಸೇನಾ ಪಡೆಯ ಅಧಿಕಾರಿಗಳು, ಪೊಲೀಸ್ ಮುಖ್ಯಸ್ಥರು ಹಾಗೂ ಇತರರ ಸಭೆ ನಡೆಸುತ್ತಿದ್ದು,ಸಭೆಯಲ್ಲಿ ದೇಶದ ಆಂತರಿಕ ಭದ್ರತೆ ಕುರಿತು ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಸಭೆ ಜಮ್ಮು-ಕಾಶ್ಮೀರಕ್ಕೆ ಸೀಮಿತವಾಗಿಲ್ಲವಾದರೂ ಅಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಇತರ ಐದು ರಾಜ್ಯಗಳಿಂದ ವಲಸೆ ಬಂದಿರುವ 11 ನಾಗರಿಕರು  ಹತ್ಯೆಗೀಡಾಗಿದ್ದಾರೆ. ಭಯೋತ್ಪಾದಕರು ಬೇರೆ ರಾಜ್ಯಗಳ ಜನರನ್ನು ಕಾಶ್ಮೀರದಿಂದ ಓಡಿಸಲು ಬಯಸುತ್ತಿದ್ದಾರೆ ಎಂದು ಈ ಹತ್ಯೆ ಸೂಚಿಸುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ರವಿವಾರ ಬಿಹಾರದ ಇಬ್ಬರು ವ್ಯಕ್ತಿಗಳನ್ನು ಕಾಶ್ಮೀರ ಕಣಿವೆಯ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಹತ್ಯೆಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News