ಜಮ್ಮು-ಕಾಶ್ಮೀರ:ಶವವಾಗಿ ಪತ್ತೆಯಾದ ಸಿಆರ್‌ಪಿಎಫ್ ಯೋಧ

Update: 2021-10-19 07:19 GMT

ಬನಿಹಾಲ್/ಜಮ್ಮು: ಜಮ್ಮು ಹಾಗೂ  ಕಾಶ್ಮೀರದ ರಂಬಾನ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧನ ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಾನ್ಸ್‌ಟೇಬಲ್ ರಾಜೀವ್ ರಂಜನ್ ಅವರು ಜಿಲ್ಲೆಯ ಬೂಮ್ ಚಂದರಕೂಟ್ ಪ್ರದೇಶದ 84 ನೇ ಬೆಟಾಲಿಯನ್ ಶಿಬಿರದಲ್ಲಿ ಬೆಳಿಗ್ಗೆ 8.40 ರ ಸುಮಾರಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು  ತಿಳಿದುಬಂದಿದೆ.

ಮೂಲಗಳ ಪ್ರಕಾರ ಬಿಹಾರದ ಛಾಪ್ರಾ ಜಿಲ್ಲೆಯವರಾಗಿದ್ದ ರಂಜನ್ ತನ್ನ ಸರ್ವೀಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News