ನಿಯಮ ಉಲ್ಲಂಘನೆಗೆ ಎಸ್‍ಬಿಐಗೆ ರೂ 1 ಕೋಟಿ ದಂಡ ಹೇರಿದ ರಿಸರ್ವ್ ಬ್ಯಾಂಕ್

Update: 2021-10-19 08:59 GMT

ಹೊಸದಿಲ್ಲಿ: ತನ್ನ ಕೆಲವೊಂದು ನಿರ್ದಿಷ್ಟ ಸೂಚನೆಗಳನ್ನು ಪಾಲಿಸದೇ ಇದ್ದುದಕ್ಕೆ ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂ 1 ಕೋಟಿ ದಂಡ ಹೇರಿದೆ.

ವಾಣಿಜ್ಯ ಬ್ಯಾಂಕುಗಳು ಮತ್ತು ಆಯ್ದ ಹಣಕಾಸುಸಂಸ್ಥೆಗಳು ವರದಿ ಮಾಡಿದ ವಂಚನೆಗಳನ್ನು ವರ್ಗೀಕರಣಗೊಳಿಸುವುದಕ್ಕೆ ಸಂಬಂಧಿಸದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ  ದಂಡ ಹೇರಲಾಗಿದೆ.

ಎಸ್‍ಬಿಐ ಗೆ ಸೇರಿದ ಗ್ರಾಹಕ ಖಾತೆಯೊಂದನ್ನು ಪರಾಮರ್ಶಿಸಿದ ನಂತರ ಕೆಲವೊಂದು ನಿಯಮಗಳ ಪಾಲನೆಯಾಗಿಲ್ಲ ಎಂದು ತಿಳಿದುಕೊಂಡ ರಿಸರ್ವ್ ಬ್ಯಾಂಕ್, ಶೋಕಾಸ್ ನೋಟಿಸ್ ಜಾರಿಗೊಳಿಸಿ ಈ ಉಲ್ಲಂಘನೆಗೆ ದಂಡವೇಕೆ ವಿಧಿಸಬಾರದು ಎಂದು ಪ್ರಶ್ನಿಸಿತ್ತು.

ಒಂದು ಸೈಬರ್ ಸೆಕ್ಯುರಿಟಿ ಘಟನೆಯನ್ನು ವರದಿ ಮಾಡಲು ವಿಫಲವಾಗಿದ್ದಕ್ಕೆ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮೇಲೆಯೂ ರಿಸರ್ವ್ ಬ್ಯಾಂಕ್ ಈಗಾಗಲೇ ರೂ 1.95 ಕೋಟಿ ದಂಡ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News