"ಮೋದಿ ಆಡಳಿತದ ಅವಧಿಯಲ್ಲಿ 35,000 ಶ್ರೀಮಂತ ಉದ್ಯಮಿಗಳು ದೇಶ ತೊರೆದಿದ್ದಾರೆ": ಕೊಲ್ಕತ್ತಾ ಸಚಿವ

Update: 2021-10-21 12:06 GMT

ಕೊಲ್ಕತ್ತಾ: ಕೇಂದ್ರದಲ್ಲಿ  ನರೇಂದ್ರ ಮೋದಿ ಸರಕಾರದ ಅವಧಿಯಲ್ಲಿ 2014ರಿಂದ 2020ರ ನಡುವೆ 35,000 ಶ್ರೀಮಂತ ಉದ್ಯಮಿಗಳು ದೇಶವನ್ನು ತೊರೆದಿದ್ದಾರೆ, ಎಂದು ಪಶ್ಚಿಮ ಬಂಗಾಳ ವಿತ್ತ ಸಚಿವ ಅಮಿತ್ ಮಿತ್ರ ಹೇಳಿದ್ದಾರೆ.

ಇದು "ಭೀತಿ" ಯಿಂದಾಗಿರಬಹುದೇ ಎಂದು  ಪ್ರಶ್ನಿಸಿದ ಅವರು  ಭಾರತೀಯ ಉದ್ಯಮಿಗಳು ಈ ರೀತಿ ದೇಶವನ್ನು ತೊರೆದಿರುವ ಕುರಿತಂತೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಶ್ವೇತಪತ್ರ ಮಂಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಅಧ್ಯಯನ ವರದಿಗಳನ್ನು ಉಲ್ಲೇಖಿಸಿದ ಮಿತ್ರ, "2014-18 ಅವಧಿಯಲ್ಲಿ 23,000 ಶ್ರೀಮಂತ ಉದ್ಯಮಿಗಳು ದೇಶವನ್ನು ತೊರೆದಿದ್ದಾರೆ (ಮೋರ್ಗನ್ ಸ್ಟೇನ್ಲಿ ವರದಿ) ಇದು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು. 7,000 ಮಂದಿ ಭಾರತವನ್ನು 2019ರಲ್ಲಿ (ಆಫ್ರ್‍ಏಷ್ಯಾ ಬ್ಯಾಂಕ್) ಹಾಗೂ 5,000 ಮಂದಿ 2020ರಲ್ಲಿ ತೊರೆದಿದ್ದರು( ಜಿಡಬ್ಲ್ಯುಎಂ ರಿವೀವ್)'' ಎಂದು ಮಿತ್ರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News