ಡ್ರಗ್ಸ್ ಪ್ರಕರಣ:ಅ.30ರ ತನಕ ಆರ್ಯನ್ ಖಾನ್ ನ್ಯಾಯಾಂಗ ಬಂಧನ ವಿಸ್ತರಣೆ

Update: 2021-10-21 12:34 GMT

 ಹೊಸದಿಲ್ಲಿ: ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಹಾಗೂ  ಇತರ 7 ಮಂದಿಯ ನ್ಯಾಯಾಂಗ ಬಂಧನವನ್ನು ಮುಂಬೈನ ವಿಶೇಷ ಎನ್‌ಸಿಬಿ ಸೆಷನ್ಸ್ ನ್ಯಾಯಾಲಯವು ಅಕ್ಟೋಬರ್ 30ರ ತನಕ ಗುರುವಾರ ವಿಸ್ತರಿಸಿದೆ.

ಆರೋಪಿಗಳನ್ನು ದೈಹಿಕವಾಗಿ ಅಥವಾ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿಲ್ಲ. ಆರ್ಯನ್ ಖಾನ್ ಅವರನ್ನು ಈ ಮೊದಲು ಅಕ್ಟೋಬರ್ 7 ರಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.

ಏತನ್ಮಧ್ಯೆ ನಟಿ ಅನನ್ಯ ಪಾಂಡೆಯವರ ಮುಂಬೈನ ನಿವಾಸದ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡ್ರಗ್ಸ್ ಆನ್ ಕ್ರೂಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ಲ್ಯಾಪ್ ಟಾಪ್ ಹಾಗೂ  ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ನಂತರ ಪಾಂಡೆ ತನ್ನ ತಂದೆ, ನಟ ಚಂಕಿ ಪಾಂಡೆಯೊಂದಿಗೆ ಎನ್‌ಸಿಬಿ ಕಚೇರಿಗೆ ವಿಚಾರಣೆಗೆ ಹೋದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News