95 ಶೇ. ಭಾರತೀಯರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ:ಇಂಧನ ಬೆಲೆ ಏರಿಕೆಗೆ ಉತ್ತರಪ್ರದೇಶ ಸಚಿವರ ಉತ್ತರ

Update: 2021-10-21 12:53 GMT
photo: Facebook/Upendra Tiwari

ಜಲೌನ್ (ಯುಪಿ): 95 ಪ್ರತಿಶತ ಭಾರತೀಯರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ ಹಾಗೂ  ಬೆರಳೆಣಿಕೆಯಷ್ಟು ಜನರು ಮಾತ್ರ  ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಾರೆ ಎಂದು ಉತ್ತರ ಪ್ರದೇಶದ ಸಚಿವರು ಇಂದು ಪೆಟ್ರೋಲ್ ಹಾಗೂ  ಇಂಧನ ಬೆಲೆಗಳು ಸತತವಾಗಿ ಎರಡನೇ ದಿನವೂ ಹೆಚ್ಚಾಗಿ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿರುವ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಪಶ್ಚಿಮ ಉತ್ತರ ಪ್ರದೇಶದ ಜಲೌನ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಸಚಿವ ಉಪೇಂದ್ರ ತಿವಾರಿ, "ಪ್ರತಿಪಕ್ಷಗಳಿಗೆ  ಸರಕಾರವನ್ನು ಗುರಿಯಾಗಿಸಲು ಯಾವುದೇ ವಿಚಾರವಿಲ್ಲ. ನೀವು 2014 ಕ್ಕಿಂತ ಮೊದಲು ಹಾಗೂ  ಈಗಿನ ಅಂಕಿ-ಅಂಶಗಳನ್ನು ತೆಗೆದುಕೊಳ್ಳಿ. ಮೋದಿಜಿ ಹಾಗೂ  ಯೋಗಿಜಿ ಸರಕಾರಗಳು ರಚನೆಯಾದ ನಂತರ ತಲಾ ಆದಾಯವು ದ್ವಿಗುಣಗೊಂಡಿದೆ" ಎಂದು ಹೇಳಿದರು.

"ಪೆಟ್ರೋಲ್ ಹಾಗೂ  ಡೀಸೆಲ್ ಬೆಲೆಗಳಿಗೆ ಸಂಬಂಧಿಸಿದಂತೆ ಹೇಳಬೇಕೆಂದರೆ ಈಗ ಬೆರಳೆಣಿಕೆಯಷ್ಟು ಜನರು ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಾರೆ ಹಾಗೂ ಅವರಿಗೆ ಪೆಟ್ರೋಲ್ ಅಗತ್ಯವಿದೆ. ಪ್ರಸ್ತುತ, ಸಮಾಜದಲ್ಲಿ 95 ಪ್ರತಿಶತ ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ" ಎಂದು ತಿವಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News