ಭೀಮಾ ಕೋರೆಗಾಂವ ಆಯೋಗದಿಂದ ಪರಮಬೀರ್ ಸಿಂಗ್,ಶುಕ್ಲಾಗೆ ಸಮನ್ಸ್

Update: 2021-10-22 18:34 GMT

ಮುಂಬೈ,ಅ.22: ಭೀಮಾ ಕೋರೆಗಾಂವ್ ಗ್ರಾಮದಲ್ಲಿ 2018 ಜನವರಿಯಲ್ಲಿ ಸಂಭವಿಸಿದ್ದ ಹಿಂಸಾಚಾರಗಳಿಗೆ ಸಂಬಂಧಿಸಿದ್ದ ಸ್ಥಿತಿಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಸಾಕ್ಷಿಗಳಾಗಿ ನ.8ರಂದು ಅಥವಾ ಅದಕ್ಕೂ ಮುನ್ನ ತನ್ನೆದುರು ಹಾಜರಾಗುವಂತೆ ಭೀಮಾ ಕೊರೇಗಾಂವದ ಆಯೋಗವು ಐಪಿಎಸ್ ಅಧಿಕಾರಿಗಳಾದ ಪರಮಬೀರ್ ಸಿಂಗ್ ಮತ್ತು ರಶ್ಮಿ ಶುಕ್ಲಾ ಅವರಿಗೆ ಸಮನ್ಸ್ ಹೊರಡಿಸಿದೆ.

ಭೀಮಾ ಕೋರೆಗಾಂವ್ ಹಿಂಸಾಚಾರ ಸಂಭವಿಸಿದಾಗ ಈಗ ನಾಪತ್ತೆಯಾಗಿರುವ ಸಿಂಗ್ ಮಹಾರಾಷ್ಟ್ರದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ)ಯಾಗಿದ್ದರು. ರಶ್ಮಿ ಶುಕ್ಲಾ ಆಗ ಪುಣೆ ಪೊಲೀಸ್ ಕಮಿಷನರ್ ಆಗಿದ್ದು,ಹಾಲಿ ಹೈದರಾಬಾದ್ನಲ್ಲಿ ಸಿಆರ್ಪಿಎಫ್ನ ಎಡಿಜಿ(ದ.ವಲಯ)ಯಾಗಿದ್ದಾರೆ.

ಇಬ್ಬರೂ ಅಧಿಕಾರಿಗಳು ಅಫಿಡವಿಟ ಗಳನ್ನು ಸಲ್ಲಿಸಿಲ್ಲವಾದ್ದರಿಂದ ಅವನ್ನು ಸಲ್ಲಿಸಲು ಅವರು ಸ್ವತಂತ್ರರಾಗಿದ್ದಾರೆ ಎಂದು ಆಯೋಗವು ಹೇಳಿದೆ. ಈ ಇಬ್ಬರೂ ಐಪಿಎಸ್ ಅಧಿಕಾರಿಗಳು ಸದ್ಯ ಪ್ರತ್ಯೇಕ ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News