×
Ad

ಉತ್ತರಪ್ರದೇಶ:ನವೆಂಬರ್ ಅಂತ್ಯದಿಂದ ಯುವಜನರಿಗೆ ಉಚಿತ ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನ್‌ ವಿತರಣೆ

Update: 2021-10-23 23:10 IST

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ತಮ್ಮ ಸರಕಾರವು ನವೆಂಬರ್ ಅಂತ್ಯದ ವೇಳೆಗೆ ಯುವಜನರಿಗೆ ಟ್ಯಾಬ್ಲೆಟ್‌ಗಳು ಹಾಗೂ  ಸ್ಮಾರ್ಟ್‌ಫೋನ್‌ಗಳನ್ನುಉಚಿತವಾಗಿ ವಿತರಿಸಲು ಆರಂಭಿಸಲಿದೆ ಎಂದು ಶನಿವಾರ ಹೇಳಿದ್ದಾರೆ.

ಸುಲ್ತಾನಪುರದಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿನ ಶಿಲಾನ್ಯಾಸ ನೆರವೇರಿಸುವಾಗ ಅವರು ಈ ಘೋಷಣೆ ಮಾಡಿದರು.

ತನ್ನ ಸರಕಾರವು ಯಾವುದೇ ತಾರತಮ್ಯವಿಲ್ಲದೆ ಪ್ರತಿ ಯುವಕರಿಗೆ ಉದ್ಯೋಗವನ್ನು ಒದಗಿಸಲು ಕೆಲಸ ಮಾಡುತ್ತಿದೆ ಎಂದು ಪ್ರತಿಪಾದಿಸಿದ ಅವರು, "ಉತ್ತರ ಪ್ರದೇಶದ ಯುವಕರನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು, ರಾಜ್ಯ ಸರಕಾರವು ನವೆಂಬರ್ ಕೊನೆಯ ವಾರದಿಂದ ಟ್ಯಾಬ್ಲೆಟ್‌ಗಳು ಹಾಗೂ  ಲ್ಯಾಪ್‌ಟಾಪ್‌ಗಳನ್ನು ನೀಡಲು ಆರಂಭಿಸುತ್ತದೆ" ಎಂದು ಹೇಳಿದರು.

ಮುಖ್ಯಮಂತ್ರಿಗಳು ಸುಲ್ತಾನಪುರದಲ್ಲಿ  46.33 ಕೋಟಿ ಮೌಲ್ಯದ 126 ಅಭಿವೃದ್ಧಿ ಯೋಜನೆಗಳು ಹಾಗೂ  ಅಂಬೇಡ್ಕರ್ ನಗರದಲ್ಲಿ 334.24 ಕೋಟಿ ಮೌಲ್ಯದ 99 ಯೋಜನೆಗಳಿಗೆ ಚಾಲನೆ ನೀಡಿದರು ಎಂದು ಯುಪಿ ಸರಕಾರ ಲಕ್ನೋದಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.

ಸುಲ್ತಾನ್‌ಪುರದಲ್ಲಿ ಕಾಂಗ್ರೆಸ್ ಹಾಗೂ  ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಆದಿತ್ಯನಾಥ್, ಹಿಂದಿನ ಸರಕಾರಗಳು "ಜನರ ನಂಬಿಕೆಯೊಂದಿಗೆ ಆಟವಾಡುವುದು ಹಾಗೂ ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುವ ಒಂದೇ ಒಂದು ಉದ್ದೇಶವನ್ನು ಹೊಂದಿದ್ದವು’’ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News