"ಪ್ರಯಾಣ ಮಾಡದಿರಿ, ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿ": ಹಬ್ಬದ ದಿನಗಳಲ್ಲಿ ಸರಕಾರದ ಸಲಹೆ

Update: 2021-10-23 18:23 GMT

ಹೊಸದಿಲ್ಲಿ: ಹಬ್ಬ ಹರಿದಿನಗಳಲ್ಲಿ ಕೊರೋನವೈರಸ್ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರ ಶನಿವಾರ ಸಲಹೆಯಲ್ಲಿ ತಿಳಿಸಿದೆ.  ಆನ್‌ಲೈನ್ ಶಾಪಿಂಗ್ ಅನ್ನು ಉತ್ತೇಜಿಸುವುದು ಹಾಗೂ ಕೆಲವು ದೇಶಗಳಲ್ಲಿ ಹೆಚ್ಚಾಗುತ್ತಿರುವ ಸೋಂಕಿನ ಪ್ರಮಾಣ ತಡೆಯಲು  ಅನಗತ್ಯ ಪ್ರಯಾಣವನ್ನು ತಪ್ಪಿಸುವಂತಹ ಕ್ರಮಗಳನ್ನು ಸರಕಾರವು ಪಟ್ಟಿ ಮಾಡಿದೆ.

*ಹಬ್ಬದ ಆಚರಣೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ.

*ಶೇಕಡಾ 5 ಕ್ಕಿಂತ ಹೆಚ್ಚು ಪರೀಕ್ಷೆಗಳು ಪಾಸಿಟಿವ್ ಆಗುತ್ತಿರುವ ಕಂಟೈನ್‌ಮೆಂಟ್ ವಲಯಗಳು ಮತ್ತು ಜಿಲ್ಲೆಗಳಲ್ಲಿ ಯಾವುದೇ ಸಾಮೂಹಿಕ ಕೂಟಗಳಿಲ್ಲ.

*ರಾಜ್ಯ ಸರಕಾರ ಸಮರ್ಪಕವಾಗಿ ಮುಂಚಿತವಾಗಿಯೇ ನಿರ್ದೇಶನ ನೀಡಬೇಕು.

*ಮುಂಗಡ ಅನುಮತಿಯೊಂದಿಗೆ ಅನುಮತಿಸಲಾದ ಕೂಟಗಳನ್ನು ಹಾಗೂ  ಸೀಮಿತ ಪಾಲ್ಗೊಳ್ಳುವವರನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು.

*ಮಾಲ್‌ಗಳು, ಸ್ಥಳೀಯ ಮಾರುಕಟ್ಟೆಗಳು ಮತ್ತು ಪೂಜಾ ಸ್ಥಳಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.

*ಕೋವಿಡ್ ನಿರ್ವಹಣೆಯ ಐದು ಸ್ತಂಭಗಳನ್ನು ಅನುಸರಿಸಿ - ಟೆಸ್ಟ್, ಟ್ರ್ಯಾಕ್, ಟ್ರೀಟ್ , ವ್ಯಾಕ್ಸಿನೇಟ್ ಹಾಗೂ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಿ.

*ಪ್ರಕರಣಗಳ ಪಥದ ಮೇಲೆ ಜಿಲ್ಲಾ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News