ಇದು ಜನರ ಜೀವನದ ವಿಷಯ: ಅಣೆಕಟ್ಟಿನ ನೀರಿನ ಮಟ್ಟಕ್ಕೆ ಸಂಬಂಧಿಸಿ ಕೇರಳ, ತಮಿಳುನಾಡಿಗೆ ಸುಪ್ರೀಂಕೋರ್ಟ್ ತರಾಟೆ

Update: 2021-10-25 12:41 GMT

ಹೊಸದಿಲ್ಲಿ: ಕೇರಳದ ಹಲವು ಭಾಗಗಳಲ್ಲಿ ಸುರಿದ ಭಾರೀ ಮಳೆ ಹಾಗೂ  ಪ್ರವಾಹಕ್ಕೆ 20 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ ಕೆಲವು ದಿನಗಳ ನಂತರ ಸಮನ್ವಯದ ಕೊರತೆಯ ಕುರಿತು ಸುಪ್ರೀಂ ಕೋರ್ಟ್ ಸೋಮವಾರ  ಕೇರಳ ಹಾಗೂ  ತಮಿಳುನಾಡು ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಹಲವು ವರ್ಷಗಳಿಂದ ಉಭಯ ರಾಜ್ಯಗಳ ನಡುವಿನ ವಿವಾದದ ಕೇಂದ್ರಬಿಂದುವಾಗಿರುವ ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟದ ಕುರಿತು ಕಳವಳ ವ್ಯಕ್ತಪಡಿಸಿದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

"ರಾಜ್ಯ ಸರಕಾರಗಳೊಂದಿಗೆ ಸಮನ್ವಯದಿಂದ ಪರಸ್ಪರ ಸಮಾಲೋಚಿಸಲು ನಾವು ಎಲ್ಲಾ ಪಕ್ಷಗಳಿಗೆ ನಿರ್ದೇಶನ ನೀಡುತ್ತೇವೆ. ನೀರಿನ ಮಟ್ಟಕ್ಕೆ ಸಂಬಂಧಿಸಿ ನಿರ್ಧಾರ ಕೈಗೊಳ್ಳಿ. ತಕ್ಷಣ ಅದನ್ನು ಮಾಡಿ. ಇದು ತುಂಬಾ ಗಂಭೀರವಾದ ವಿಷಯವಾಗಿದೆ. ಇದು ಜನರ ಪ್ರಾಣ ಹಾಗೂ  ಆಸ್ತಿಯ ವಿಷಯವಾಗಿದೆ" ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ  ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News