ಮಾಹಿತಿ ಸೋರಿಕೆ ಆರೋಪ:ನೌಕಾಪಡೆಯ ಕಮಾಂಡರ್,ಇಬ್ಬರು ನಿವೃತ್ತ ಅಧಿಕಾರಿಗಳ ಬಂಧನ

Update: 2021-10-26 12:10 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ನೌಕಾಪಡೆಯ ಕಿಲೋ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಉನ್ನತೀಕರಣದ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನೌಕಾಪಡೆಯ ಸೇವೆಯಲ್ಲಿರುವ ಅಧಿಕಾರಿ ಹಾಗೂ  ಇಬ್ಬರು ನಿವೃತ್ತ ಅಧಿಕಾರಿಗಳನ್ನು ಬಂಧಿಸಿದೆ ಎಂದು NDTV ವರದಿ ಮಾಡಿದೆ.

ಈ ಪ್ರಕರಣದಲ್ಲಿ ಇನ್ನೂ  ಹೆಚ್ಚಿನ ಬಂಧನಗಳ ಸಾಧ್ಯತೆ ಇದ್ದು, ಮಾಹಿತಿ ಸೋರಿಕೆಯಲ್ಲಿ ವಿದೇಶಿ ಗುಪ್ತಚರ ಸಂಸ್ಥೆಗಳು ಭಾಗಿಯಾಗಿವೆಯೇ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.

ಈ ವಿಷಯವನ್ನು ವೈಸ್ ಅಡ್ಮಿರಲ್ ಹಾಗೂ  ರಿಯರ್ ಅಡ್ಮಿರಲ್ ತನಿಖೆ ನಡೆಸುತ್ತಿದ್ದಾರೆ ಎಂದು ನೌಕಾಪಡೆಯ ಮೂಲಗಳು ಖಚಿತಪಡಿಸಿವೆ.

ವರ್ಗೀಕೃತ ಮಾಹಿತಿಯನ್ನು ಹಂಚಿಕೊಂಡ ಆರೋಪ ಹೊತ್ತಿರುವ ಮುಂಬೈ ಮೂಲದ ಸೇವೆಯಲ್ಲಿರುವ ಅಧಿಕಾರಿ ಕಮಾಂಡರ್ ಹುದ್ದೆಯನ್ನು ಹೊಂದಿದ್ದಾರೆ.

ಸೋವಿಯತ್ ನೌಕಾಪಡೆಗಾಗಿ ಸೋವಿಯತ್ ಒಕ್ಕೂಟದಲ್ಲಿ ವಿನ್ಯಾಸಗೊಳಿಸಿದ ಹಾಗೂ  ನಿರ್ಮಿಸಲಾದ ಕಿಲೋ ವರ್ಗದ ಜಲಾಂತರ್ಗಾಮಿ ನೌಕೆಗಳು ಪ್ರಪಂಚದ ಅತ್ಯಂತ ಸಾಮಾನ್ಯವಾದ ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳಲ್ಲಿ ಸೇರಿವೆ ಹಾಗೂ  ಪ್ರಸ್ತುತ ಹಲವಾರು ದೇಶಗಳ ನೌಕಾಪಡೆಗಳಲ್ಲಿ ಸೇವೆಯಲ್ಲಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News